alex Certify BIG NEWS: ನಿಮಗೂ ಕಡಿಮೆ ಪಡಿತರ ಸಿಗ್ತಿದೆಯಾ…? ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಮಗೂ ಕಡಿಮೆ ಪಡಿತರ ಸಿಗ್ತಿದೆಯಾ…? ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಿ

ಪಡಿತರ ಚೀಟಿ ಮೂಲಕ ಸರ್ಕಾರ ರಾಜ್ಯದಲ್ಲಿರುವ ಬಡ ಕುಟುಂಬಗಳಿಗೆ ಪಡಿತರವನ್ನು ಒದಗಿಸುತ್ತದೆ. ಆದರೆ ಅನೇಕ ಬಾರಿ ವಿತರಕರು ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ನೀಡಲು ನಿರಾಕರಿಸುತ್ತಾರೆ. ಇಲ್ಲವೆ ಕಡಿಮೆ ಪಡಿತರ  ನೀಡುತ್ತಾರೆ. ಸರಿಯಾಗಿ ಪಡಿತರ ಸಿಕ್ಕಿಲ್ಲವೆಂದಾದ್ರೆ ಚಿಂತಿಸುವ ಅಗತ್ಯವಿಲ್ಲ. ಸರ್ಕಾರ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ. ಅಲ್ಲಿಗೆ ಕರೆ ಮಾಡಿ ದೂರು ದಾಖಲಿಸಬಹುದು.

ಈ ಸಹಾಯವಾಣಿ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕರ್ನಾಟಕದ ಸಹಾಯವಾಣಿ ಸಂಖ್ಯೆ 1800 425 9339. ಈ ನಂಬರ್ ಗೆ ಕರೆ ಮಾಡುವ ಮೂಲಕ ನೀವು ಪಡಿತರಕ್ಕೆ ಸಂಬಂಧಿಸಿದ ದೂರನ್ನು ದಾಖಲಿಸಬಹುದು. https://nfsa.gov.in/portal/State_UT_Toll_Free_AA ಕ್ಲಿಕ್ ಮಾಡಿದ್ರೆ ಎಲ್ಲ ರಾಜ್ಯದ ಸಹಾಯವಾಣಿ ಸಂಖ್ಯೆ ನಿಮಗೆ ಸಿಗುತ್ತದೆ. ಪಡಿತರದ ತಾರತಮ್ಯದ ಬಗ್ಗೆ ಮಾತ್ರವಲ್ಲ ಪಡಿತರಕ್ಕೆ ಅರ್ಜಿ ಸಲ್ಲಿಸಿ ತಿಂಗಳಾದ್ರೂ ಅದು ಸಿಗದೆ ಹೋದಲ್ಲಿ ಆ ಬಗ್ಗೆಯೂ ದೂರು ಸಲ್ಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...