alex Certify ರಥೋತ್ಸವದಲ್ಲೇ ಅವಘಡ: ಪಟಾಕಿ ಕಿಡಿಯಿಂದ ರಥಕ್ಕೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಥೋತ್ಸವದಲ್ಲೇ ಅವಘಡ: ಪಟಾಕಿ ಕಿಡಿಯಿಂದ ರಥಕ್ಕೆ ಬೆಂಕಿ

ಬೆಳಗಾವಿ: ಪಟಾಕಿ ಕಿಡಿ ಬಿದ್ದು ರಥಕ್ಕೆ ಬೆಂಕಿ ತಗುಲಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆಯಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ರಥದ ಮೇಲ್ಭಾಗ ಹೊತ್ತಿ ಉರಿದಿದೆ.

ಜಡಿ ಶಂಕರಲಿಂಗ ದೇವರ 38 ನೇ ರಥೋತ್ಸವದಲ್ಲಿ ಘಟನೆ ನಡೆದಿದ್ದು, ಶಿವಪೇಟೆ ಗ್ರಾಮಸ್ಥರು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ರಥೋತ್ಸವದ ಅಂಗವಾಗಿ ಪಟಾಕಿ ಸಿಡಿಸುವ ವೇಳೆ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡು ರಥದ ಮೇಲ್ಭಾಗ ಹೊತ್ತಿ ಉರಿದಿದೆ. ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಹಾನಿಯಾಗಿಲ್ಲವೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...