alex Certify ಆಹಾ…! ಆಗಸದಲ್ಲಿ ಇದೆಂಥ ಕೌತುಕ…… ಅಪರೂಪದ ಫೋಟೋ ಸೆರೆಹಿಡಿದ ಛಾಯಾಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾ…! ಆಗಸದಲ್ಲಿ ಇದೆಂಥ ಕೌತುಕ…… ಅಪರೂಪದ ಫೋಟೋ ಸೆರೆಹಿಡಿದ ಛಾಯಾಗ್ರಾಹಕ

ಅಮೆರಿಕದ ವ್ಯೋಮಿಂಗ್‌ನಲ್ಲಿ ಆಕಾಶ ವೀಕ್ಷಕರು ಅಪರೂಪದ ಕುತೂಹಲದ ಕ್ಷಣವನ್ನು ಸೆರೆಹಿಡಿದಿದ್ದಾರೆ. ಸಮುದ್ರದ ಅಲೆಗಳಂತೆಯೇ ಅಸಾಮಾನ್ಯ ಮತ್ತು ಸುಂದರವಾದ ಮೋಡದ ರಚನೆಗಳ ಚಿತ್ರಗಳನ್ನು ತೆಗೆದಿದ್ದಾರೆ. ಶೆರಿಡನ್‌ನಲ್ಲಿರುವ ಬಿಗಾರ್ನ್ ಪರ್ವತಗಳ ಶಿಖರದಲ್ಲಿ ಈ ಮನಮೋಹಕ ನೋಟ ಗೋಚರಿಸಿದೆ.

ಈ ರಚನೆಯನ್ನು ಕೆಲ್ವಿನ್-ಹೆಲ್ಮ್‌ಹೋಲ್ಟ್ಜ್ ಅಸ್ಥಿರತೆ ಎಂದು ಕರೆಯಲಾಗುತ್ತದೆ. ಇದನ್ನು ಬೀಸುವ ಮೋಡಗಳು ಎಂದೂ ಕರೆಯುತ್ತಾರೆ.

ಭೌತಶಾಸ್ತ್ರದ ವಿದ್ಯಮಾನವನ್ನು ಅಧ್ಯಯನ ಮಾಡಿದ ವಿಜ್ಞಾನಿಗಳಾದ ಲಾರ್ಡ್ ಕೆಲ್ವಿನ್ ಮತ್ತು ಹರ್ಮನ್ ವಾನ್ ಹೆಲ್ಮ್‌ಹೋಲ್ಟ್ಜ್ ಅವರ ಹೆಸರನ್ನು ಈ ರೂಪಕ್ಕೆ ಇಡಲಾಗಿದೆ.

ಇದರ ಸುಂದರ ನೋಟಗಳನ್ನು ರಾಚೆಲ್ ಗಾರ್ಡನ್ ಎನ್ನುವವರು ಮೊದಲು ಶೇರ್​ ಮಾಡಿದ್ದಾರೆ. ಇದನ್ನು ನೋಡಿದ ತಕ್ಷಣ ಸೆರೆ ಹಿಡಿಯಬೇಕು ಎಂದು ಎನಿಸಿತು. ಅದನ್ನು ಸೆರೆ ಹಿಡಿದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದೆ. ಇದಕ್ಕೆ ಇಷ್ಟೊಂದು ಅದ್ಭುತ ಪ್ರತಿಕ್ರಿಯೆ ದೊರಕುತ್ತದೆ ಎಂದು ತಿಳಿದಿರಲಿಲ್ಲ ಎಂದು ರಾಚೆಲ್ ಗಾರ್ಡನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...