alex Certify 25 ವರ್ಷದ ಬಳಿಕ ಅರಳಿದೆ ವಿಚಿತ್ರ ಹೆಸರಿನ ಈ ಸಸ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ವರ್ಷದ ಬಳಿಕ ಅರಳಿದೆ ವಿಚಿತ್ರ ಹೆಸರಿನ ಈ ಸಸ್ಯ…!

ಪುರುಷರ ಜನನಾಂಗವನ್ನು ಹೋಲುವ ಸಸಿಯೊಂದು 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅರಳಿದ ಘಟನೆ ನೆದರ್ಲೆಂಡ್ಸ್‌ನ ಲೇಯ್ಡೆನ್‌ ನಲ್ಲಿ ಜರುಗಿದೆ. ಶಿಶ್ನ ಸಸಿ ಎಂದು ಕರೆಯಲಾಗುವ ಈ ಸಸಿಯು ಆರೂವರೆ ಅಡಿ ಉದ್ದ ಬೆಳೆಯಬಲ್ಲದು.

ಅಮೋರ್ಫೋಫಾಲ್ಲಸ್ ಡೆಕಸ್-ಸಿಲಾವೆ ಎಂದು ವೈಜ್ಞಾನಿಕ ಹೆಸರಿನಿಂದ ಗುರುತಿಸಲ್ಪಟ್ಟ ಈ ಸಸಿ 20 ವರ್ಷಗಳಲ್ಲಿ ಒಮ್ಮೆ ಮಾತ್ರವೇ ಅರಳುತ್ತದೆ. ಯೂರೋಪ್‌ನಲ್ಲಿ ಈ ಸಸಿಯು ಅರಳಿರುವುದು ಕೇವಲ ಮೂರನೇ ಬಾರಿ ಎಂದು ತಜ್ಞರು ನಂಬಿದ್ದಾರೆ.

ʼವರ್ಕ್‌ ಫ್ರಮ್ ಹೋಂ‌ʼ ವೇಳೆ ನಡೆದ ತಮಾಷೆ ಸಂಗತಿಯನ್ನು ಹಂಚಿಕೊಂಡ ಗೂಗಲ್‌ ಸಿಇಒ

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಬೆಳೆಯುವ ಈ ಸಸಿಯನ್ನು ಲೇಯ್ಡೆನ್‌ನ ಸಸ್ಯೋದ್ಯಾನದಲ್ಲಿ ಬೆಳೆಸಲಾಗಿದೆ. ಬೆಚ್ಚನೆಯ ಹಾಗೂ ಮಧ್ಯಮ ತೇವಾಂಶವಿರುವ ವಾತಾವರಣದಲ್ಲಿ ಮಾತ್ರವೇ ಬೆಳೆಯುವ ಈ ಸಸಿಯನ್ನು ಬೆಳೆಸುವುದು ಭಾರೀ ಕಷ್ಟವಾದ ಕೆಲಸ.

ಈ ಸಸಿಯು ಅರಳಿದಾಗ ಕೊಳೆತ ಮಾಂಸದ ವಾಸನೆ ಬಂದರೂ ಸಹ ಅದನ್ನು ನೋಡಲು ಮಂದಿ ಭಾರೀ ಉತ್ಸಾಹದಿಂದ ಸಸ್ಯೋದ್ಯಾನಕ್ಕೆ ಬಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...