alex Certify ಮೂರನೇ ಹೆರಿಗೆಗೆಂದು ತವರಿಗೆ ಹೋದ ಪತ್ನಿ, ಗರ್ಭಿಣಿಯಾದ ಪುತ್ರಿ: ಬಯಲಾಯ್ತು ತಂದೆಯ ನೀಚ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಹೆರಿಗೆಗೆಂದು ತವರಿಗೆ ಹೋದ ಪತ್ನಿ, ಗರ್ಭಿಣಿಯಾದ ಪುತ್ರಿ: ಬಯಲಾಯ್ತು ತಂದೆಯ ನೀಚ ಕೃತ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ಮಲಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮಲತಂದೆಯ ನೀಚ ಕೃತ್ಯದಿಂದಾಗಿ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೋಳಿ ವ್ಯಾಪಾರ ಮಾಡಿಕೊಂಡಿರುವ ಶಬ್ಬೀರ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಬಾಲಕಿಯ ತಾಯಿ ಮೊದಲ ಗಂಡನಿಂದ ಡೈವೋರ್ಸ್ ಪಡೆದುಕೊಂಡಿದ್ದು ಶಬ್ಬೀರ್ ನನ್ನು ಮದುವೆಯಾಗಿದ್ದಳು. ಶಬ್ಬೀರ್ ಗೆ ಕೂಡ ಇದು ಎರಡನೇ ಮದುವೆಯಾಗಿದ್ದು, ಎರಡನೇ ಪತ್ನಿಗೆ ಮೂವರು ಮಕ್ಕಳಾಗಿದ್ದಾರೆ.

ಮೊದಲ ಗಂಡನ ಮಗಳಿಗೆ 15 ವರ್ಷವಾಗಿದ್ದು ಆಕೆಯ ಮೇಲೆ ಶಬ್ಬೀರ್ ಅತ್ಯಾಚಾರ ಎಸಗಿದ್ದಾನೆ. ಪತ್ನಿ ಮೂರನೇ ಮಗುವಿನ ಹೆರಿಗೆಗೆ ತವರಿಗೆ ಹೋಗಿದ್ದು, ಈ ವೇಳೆ ಬಾಲಕಿಯನ್ನು ಬೆದರಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮಲತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ, ತನ್ನ ತಂದೆ ಮೊದಲ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಮೊದಲ ತಂದೆ ಸ್ಥಳೀಯರಿಗೆ ಮಾಹಿತಿ ನೀಡಿ ಶಭ್ಬೀರ್ ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...