alex Certify ಆಸ್ಪತ್ರೆಯಲ್ಲೇ ಸರಸವಾಡಿದ ಜೋಡಿ: ದೃಶ್ಯ ನೋಡಿದ ಬಾಲಕಿ ಮೇಲೆ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲೇ ಸರಸವಾಡಿದ ಜೋಡಿ: ದೃಶ್ಯ ನೋಡಿದ ಬಾಲಕಿ ಮೇಲೆ ಅತ್ಯಾಚಾರ

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿ ಮತ್ತು  ಕೃತ್ಯವೆಸಗಲು ಸಹಕಾರ ನೀಡಿದ ಮಹಿಳೆಯನ್ನು ಬಂಧಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡು ಆರೋಪಿ ಮತ್ತು ಸ್ನೇಹಿತ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ನೋಡಲು ವಿಶೇಷ ಸಾಮರ್ಥ್ಯ ಬಾಲಕಿ ಜೊತೆ ತಾಯಿ ಹೋಗಿದ್ದರು. ಆರೋಪಿ ಮಹಿಳೆ ಜೊತೆ ಬಾಲಕಿಯನ್ನು ಬಿಟ್ಟು ತಾಯಿ ಹೊರಗೆ ಹೋಗಿದ್ದರು.

ಈ ವೇಳೆ ಆಸ್ಪತ್ರೆಯಲ್ಲಿಯೇ ಆರೋಪಿ ಮತ್ತು ಮಹಿಳೆ ಸರಸವಾಡುತ್ತಿದ್ದನ್ನು ಬಾಲಕಿ ನೋಡಿದ್ದಾಳೆ. ಆಗ ಬಾಲಕಿ ಮೇಲೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿ ಬಾಯಿ ಮುಚ್ಚಿದ್ದಾಳೆ. ಬಳಿಕ ಆಸ್ಪತ್ರೆಯಲ್ಲಿ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನು ಬಿಟ್ಟು ಹೋಗಿದ್ದ ತಾಯಿ ವಿಚಾರ ತಿಳಿದು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಅಬ್ದುಲ್ ಹಲೀಂ ಮತ್ತು ಶಮಿನಾಭಾನು ಅವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...