alex Certify ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಪಾಪಿ ಪೋಷಕರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಪಾಪಿ ಪೋಷಕರು…..!

ನವಜಾತ ಶಿಶುವನ್ನು ಪೋಷಕರು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಅಮಾನವೀಯ ಘಟನೆಯೊಂದು ಜಾರ್ಖಂಡ್​ ರಾಜಧಾನಿಯ ರಾಂಚಿಯ ರಿಮ್ಸ್​ನಲ್ಲಿ ವರದಿಯಾಗಿದೆ.

ಹುಟ್ಟಿದ ಮಗು ಎರಡು ತಲೆಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಪೋಷಕರು ಮಗುವನ್ನು ಆಸ್ಪತ್ರೆಯಲ್ಲಿಯೇ ತೊರೆದಿದ್ದಾರೆ ಎನ್ನಲಾಗಿದೆ .
ನವಜಾತ ಶಿಶು ಮೆನಿಂಗ್​ ಎನ್ಸೆಫಲೋಸಿಲ್ನೋ ಎಂಬ ಸಮಸ್ಯೆಯಿಂದ ಬಳಲುತ್ತಿದೆ. ಇದರಿಂದಾಗಿ ತಲೆಯ ಹಿಂಭಾಗವು ಚೀಲದಂತಾಗಿದ್ದು ಎರಡು ತಲೆ ಹೊಂದಿದೆ ಎಂದೆನಿಸುತ್ತದೆ. ಎರಡು ತಲೆಯ ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಕ್ರೂರ ಪೋಷಕರು ಹಸುಗೂಸನ್ನು ಆಸ್ಪತ್ರೆಯ ಬೆಡ್​ ಮೇಲೆಯೇ ಬಿಟ್ಟು ಎಸ್ಕೇಪ್​ ಆಗಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ ಮಗುವಿನ ಪೋಷಕರು ತಪ್ಪಾದ ವಿಳಾಸ ನೀಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ತಮ್ಮ ಮಗು ಈ ರೀತಿ ಜನಿಸಬಹುದು ಎಂದು ಮೊದಲೇ ಅಂದಾಜು ಇದ್ದ ಹಿನ್ನೆಲೆಯಲ್ಲಿ ಪೋಷಕರು ಈ ರೀತಿ ತಪ್ಪಾಗಿ ಹೆಸರು ಹಾಗೂ ವಿಳಾಸ ನೀಡಿದ್ದಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಅಂದಾಜಿಸಿದ್ದಾರೆ.

ಮಗು ಜನಿಸಿದ ಕೂಡಲೇ ಅದನ್ನು ಐಸಿಯುವಿನಲ್ಲಿ ಇಡಲಾಗಿತ್ತು. ಮಗು ಐಸಿಯುವಿನಲ್ಲಿ ಇದ್ದಾಗಲೇ ಪೋಷಕರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಇದೀಗ ರಿಮ್ಸ್​ ಆಸ್ಪತ್ರೆ ಸಿಬ್ಬಂದಿ ಮಗುವಿನ ಚಿಕಿತ್ಸೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಗು ಸಂಪೂರ್ಣ ಚೇತರಿಸಿಕೊಂಡ ಬಳಿಕ ಅದನ್ನು ಅನಾಥಾಶ್ರಮಕ್ಕೆ ನೀಡಲಿದ್ದೇವೆ ಎಂದು ರಿಮ್ಸ್​ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...