alex Certify ಮನೆಗೆಲಸದ ವ್ಯಕ್ತಿಯಿಂದ ಘೋರ ಕೃತ್ಯ: ವೃದ್ಧ ದಂಪತಿ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆಲಸದ ವ್ಯಕ್ತಿಯಿಂದ ಘೋರ ಕೃತ್ಯ: ವೃದ್ಧ ದಂಪತಿ ಬರ್ಬರ ಹತ್ಯೆ

ಬೆಂಗಳೂರು: ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮನಗರ ತಾಲೂಕಿನ ಬಿಡದಿ ಸಮೀಪದ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ.

ವಾಯುಸೇನೆ ಪೈಲಟ್ ಆಗಿ ನಿವೃತ್ತರಾಗಿದ್ದ 70 ವರ್ಷದ ರಘುರಾಜ್ ಮತ್ತು ಅವರ ಪತ್ನಿ ಆಶಾ(63) ಅವರನ್ನು ಹತ್ಯೆ ಮಾಡಲಾಗಿದೆ. ಬಿಹಾರ ಮೂಲದ ಮನೆಗೆಲಸದ ವ್ಯಕ್ತಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಮೊದಲ ಮಹಡಿಯಲ್ಲಿ ಪತಿ, ನೆಲಮಹಡಿಯಲ್ಲಿ ಪತ್ನಿ ಕೊಲೆ ಮಾಡಲಾಗಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...