alex Certify ವಿಮೆ ಇಲ್ಲದ ಕಾರಣಕ್ಕೆ ಅಪಘಾತ ಪ್ರಕರಣದ ವಾಹನ ಬಿಡುಗಡೆಗೆ ನಿರಾಕರಿಸುವಂತಿಲ್ಲ: ಹೈಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮೆ ಇಲ್ಲದ ಕಾರಣಕ್ಕೆ ಅಪಘಾತ ಪ್ರಕರಣದ ವಾಹನ ಬಿಡುಗಡೆಗೆ ನಿರಾಕರಿಸುವಂತಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಅಪಘಾತ ಪ್ರಕರಣಗಳಲ್ಲಿ ವಿಮೆ ಇಲ್ಲದ ಕಾರಣಕ್ಕೆ ವಾಹನ ಬಿಡುಗಡೆಗೆ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ವಾಹನಕ್ಕೆ ವಿಮೆ ಮಾಡಿಸಿಲ್ಲ ಎನ್ನುವ ಕಾರಣ ನೀಡಿ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಚೌಡೇಶ್ವರಿ ನಗರದ ಗಣೇಶ್ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠದಲ್ಲಿ ವಿಚಾರಣೆ ನಡೆದು, ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡಲಾಗಿದೆ. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ ಅಗತ್ಯ ಷರತ್ತು ವಿಧಿಸಿ ವಾಹನ ಬಿಡುಗಡೆಗೆ ಸೂಚನೆ ನೀಡಲಾಗಿದೆ.

ಸದರಿ ಪ್ರಕರಣದಲ್ಲಿ ಅರ್ಜಿದಾರ ಸಂತ್ರಸ್ತರಾಗಿದ್ದು, ಅವರ ವಾಹನ ಬಿಡುಗಡೆ ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ. ಅರ್ಜಿದಾರ ಗಣೇಶ್ ಅವರ ಕ್ಯಾಂಟರ್ ವಾಹನ 2021ರ ಜನವರಿ 22ರಂದು ಮೈಸೂರು ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಈ ವೇಳೆ ಅತಿ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದಿತ್ತು. ಕಾರಿನ ಮುಂಭಾಗ ಜಖಂ ಆಗಿ ಕೆಲವರಿಗೆ ಗಾಯಗಳಾಗಿದ್ದು, ಬಿಡದಿ ಠಾಣೆ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದರು. ಕಾರ್ ಚಾಲಕನ ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದ್ದಾಗಿ ಒಪ್ಪಿಕೊಂಡು ಶಿಕ್ಷಗೆ ಗುರಿಯಾಗಿದ್ದರು. ಅರ್ಜಿದಾರ ಗಣೇಶ್ ಅವರ ವಾಹನ ಬಿಡುಗಡೆ ಕೋರಿ ರಾಮನಗರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ವಾಹನಕ್ಕೆ ವಿಮೆ ಮಾಡದ ಕಾರಣ ನೀಡಿ ರಾಮನಗರ ನ್ಯಾಯಾಲಯ ಕ್ಯಾಂಟರ್ ಬಿಡುಗಡೆಗೆ ನಿರಾಕರಿಸಿದ್ದು, ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...