alex Certify ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನಟ

ಕಿರು ತೆರೆ ಹಾಗೂ ಹಿರಿತೆರೆ ನಟ ರಾಮ್ ಕಪೂರ್‌ ಇತ್ತೀಚೆಗಷ್ಟೇ ತಮ್ಮ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಟಿವಿ ಶೋಗಳಲ್ಲಿ ರಾಮ್ ಕಪೂರ್‌ರ ಹಾಜರಿಯನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

’ದಿ ಬಿಗ್ ಬುಲ್’, ’ಅಭಯ್‌’ ಮತ್ತು ’ಎ ಸೂಟಬಲ್ ಬಾಯ್’ನಂಥ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ರಾಮ್ ಕಿರುತೆರೆಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ.

’ಕಸಂ ಸೇ’ ಹಾಗೂ ’ಬಡೇ ಅಚ್ಚೇ ಲಗ್ತೇ ಹೈಂ’ನಂಥ ಜನಪ್ರಿಯ ಟಿವಿ ಶೋಗಳಲ್ಲಿ ಮುಂಚೂಣಿ ನಟರಾಗಿ ಕೆಲಸ ಮಾಡಿರುವ ರಾಮ್, 2019ರಲ್ಲಿ ತಮ್ಮ ಅಂಗಸೌಷ್ಠವಕ್ಕೊಂದು ಅದ್ಭುತ ಟ್ವಿಸ್ಟ್ ಕೊಟ್ಟು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ತಮ್ಮ ದೇಹದಲ್ಲಿ ಆದ ಈ ಸಕಾರಾತ್ಮಕ ಬದಲಾವಣೆಯ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ರಾಮ್ ಕಪೂರ್‌ ಹಂಚಿಕೊಂಡಿದ್ದಾರೆ.

ಷೇರು ಮಾರುಕಟ್ಟೆ ಬೆಳವಣಿಗೆ ವೀಕ್ಷಿಸುತ್ತಿರುವ ಆಟೋಚಾಲಕನ ಫೋಟೋ ವೈರಲ್

ಅಂದಿನ ಹಾಗೂ ಇಂದಿನ ಚಿತ್ರಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ ಕಪೂರ್‌. ತಮ್ಮ ಸಾಮಾನ್ಯ ಪಥ್ಯವನ್ನು ಬಿಟ್ಟುಕೊಟ್ಟು, ಪ್ರತಿನಿತ್ಯ 16 ಗಂಟೆಗಳ ಕಾಲ ಉಪವಾಸವಿದ್ದ ತಮ್ಮ ಕಥೆಯನ್ನು ಹೇಳಿಕೊಂಡ ಕಪೂರ್‌, “ಬೆಳಿಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಯಲ್ಲಿ ವೇಟ್‌ ಲಿಫ್ಟಿಂಗ್ ಮಾಡುತ್ತೇನೆ. ರಾತ್ರಿ ಮಲಗುವ ಮುನ್ನ, ಕಾರ್ಡಿಯೋ ಮಾಡುತ್ತೇನೆ. ಎಂಟು ಗಂಟೆಗಳ ಅವಧಿಯಲ್ಲಿ ಸೀಮಿತ ಆಹಾರ ಸೇವನೆ ಮಾಡುತ್ತೇನೆ. ಮಿಕ್ಕ 16 ಗಂಟೆಗಳ ಕಾಲ ನಾನು ಏನೂ ತಿನ್ನುತ್ತಲೇ ಇರಲಿಲ್ಲ. ಡೈರಿ, ಕೊಬ್ಬಿನಂಶ, ಕಾರ್ಬೋಹೈಡ್ರೇಟ್‌ ಹಾಗೂ ಸಕ್ಕರೆ ಅಂಶವಿರುವ ಉತ್ಪನ್ನಗಳ ಸೇವನೆಯನ್ನು ಬಿಟ್ಟುಬಿಟ್ಟೆ. ನನಗೆ ಗೊತ್ತಿರುವಂತೆ ಸಾಮಾನ್ಯ ಪಥ್ಯವನ್ನೇ ಬಿಟ್ಟುಬಿಟ್ಟೆ” ಎಂದು ವಿವರಿಸಿದ್ದಾರೆ ರಾಮ್ ಕಪೂರ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...