alex Certify 800 ವರ್ಷ ಹಳೆಯ ಆಲದ ಮರ ಸಂರಕ್ಷಿಸಲು ಸಂಸದರಿಂದ 2 ಕೋಟಿ ರೂ. ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

800 ವರ್ಷ ಹಳೆಯ ಆಲದ ಮರ ಸಂರಕ್ಷಿಸಲು ಸಂಸದರಿಂದ 2 ಕೋಟಿ ರೂ. ಬಿಡುಗಡೆ

ಜನ ಪ್ರತಿನಿಧಿಗಳಲ್ಲಿ ಅನನ್ಯ ವಿಷಯಗಳಲ್ಲಿ ಕಾಳಜಿ ಇರುತ್ತದೆ. ಇಲ್ಲೊಬ್ಬ ಸಂಸದರು 800 ವರ್ಷಗಳಷ್ಟು ಹಳೆಯದಾದ ಮೆಹಬೂಬ್ ​ನಗರ ಜಿಲ್ಲೆಯ ಪಿಲ್ಲಲರ್ಮರಿ ಎಂಬ ದೈತ್ಯ ಆಲದ ಮರವನ್ನು ಸಂರಕ್ಷಿಸಲು 2 ಕೋಟಿ ರೂ. ನೀಡಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಷ್​ ಕುಮಾರ್​ ಅವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯಿಂದ ಈ ಹಣ ನೀಡಿ ಆ ಮರದ ಮಹತ್ವ ಸಾರಿದ್ದಾರೆ.

ಸೆಪ್ಟೆಂಬರ್​ 12 ರಂದು ಅವರು ಈ ಪುರಾತನ ಮರ ಸ್ಥಳಕ್ಕೆ ಭೇಟಿ ನೀಡಿದ್ದು, ಅವರು ಮರವನ್ನು ಸಂರಕ್ಷಿಸಲು ರಾಜ್ಯ ಪ್ರವಾಸೋದ್ಯಮ ಸಚಿವ ವಿ ಶ್ರೀನಿವಾಸ್​ ಗೌಡ, ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಮತ್ತು ಪ್ರವಾಸೋದ್ಯಮ ಅಧಿಕಾರಿಗಳು ಮಾಡಿದ ಪ್ರಯತ್ನವನ್ನು ಶ್ಲಾಘಿಸಿದರು. ಸಂತೋಷ್​ ಅವರು ತಮ್ಮ ಭೇಟಿಯ ಚಿತ್ರಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

“ಏಷ್ಯಾದ ಎರಡನೇ ಅತಿ ದೊಡ್ಡ ಮರವಾಗಿರುವ ಈ ಆಲದ ಮರದ ಸುತ್ತಲೂ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ನನ್ನ ಸಂಸದರ ನಿಧಿಯಿಂದ 2 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ, ಇದು ಈ ಮರವನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಲು ಮತ್ತು ಈ ಸ್ಥಳಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕಷಿರ್ಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...