alex Certify BREAKING: ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಆರೋಗ್ಯ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಆರೋಗ್ಯ ಸ್ಥಿತಿ

ಆಗಸ್ಟ್‌ 10 ರಂದು ಟ್ರೆಡ್‌ ಮಿಲ್‌ ಮೇಲೆ ಓಡುವಾಗಲೇ ಹೃದಯಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ ಎಂದು ತಿಳಿದುಬಂದಿದೆ.

ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ರಾಜು ಶ್ರೀವಾತ್ಸವ್‌ ಅವರ ರಕ್ತದೊತ್ತಡದ ಮಟ್ಟ ಗಮನೀಯವಾಗಿ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಲೇ ಕೋಲ್ಕತ್ತಾದಲ್ಲಿದ್ದ ಖ್ಯಾತ ವೈದ್ಯೆ ಪದ್ಮಾ ಶ್ರೀವಾತ್ಸವ್‌ ಅವರನ್ನು ತುರ್ತಾಗಿ ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ. ಇದರ ನಡುವೆಯೂ ರಾಜು ಶ್ರೀವಾತ್ಸವ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಆರೋಗ್ಯ ಕುರಿತಂತೆ ದೇವರಲ್ಲಿ ಪ್ರಾರ್ಥಿಸಲು ಕುಟುಂಬಸ್ಥರು ಮನವಿ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...