alex Certify ನಟ ರಾಜ್‍ಕುಮಾರ್ ರಾವ್ – ಪತ್ರಲೇಖಾ ವಿವಾಹದ ವಿಡಿಯೋ ವೈರಲ್: ಇದೇ ತಾನೆ ನಿಜವಾದ ಪ್ರೀತಿ ಎಂದ ಅಭಿಮಾನಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಜ್‍ಕುಮಾರ್ ರಾವ್ – ಪತ್ರಲೇಖಾ ವಿವಾಹದ ವಿಡಿಯೋ ವೈರಲ್: ಇದೇ ತಾನೆ ನಿಜವಾದ ಪ್ರೀತಿ ಎಂದ ಅಭಿಮಾನಿಗಳು..!

ಒಂದು ದಶಕ ಕಾಲ ಪ್ರೇಮಿಗಳಾಗಿ ಸುತ್ತಾಡಿದ ಬಳಿಕ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಚಂಡೀಗಢದಲ್ಲಿ ನಟಿ, ಪ್ರಿಯತಮೆ ಪತ್ರಲೇಖಾ ಅವರೊಂದಿಗೆ ವಿವಾಹವಾಗಿದ್ದಾರೆ. ಇವರ ವಿವಾಹ ಮಹೋತ್ಸವದ ಫೋಟೋ, ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿವೆ.

ರಾಜ್-ಪತ್ರಲೇಖಾ ಅವರ ವಿವಾಹದ ವಿಡಿಯೋ ನೋಡಿದ ಅಭಿಮಾನಿಗಳಂತೂ ಮನಸೋತಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಈ ಜೋಡಿ ವಿವಾಹವಾಗಿದ್ದಾರೆ. ರಾಜ್‌ಕುಮಾರ್ ರಾವ್ ಅವರು ಪತ್ರಲೇಖಾ ಅವರ ಹಣೆಯ ಮೇಲೆ ಸಿಂಧೂರ ಹಾಕಿದ್ದಾರೆ. ನಂತರ ತಮಗೂ ಸಿಂಧೂರ ಹಾಕುವಂತೆ ಪತ್ರಲೇಖಾರನ್ನು ಕೇಳಿದ್ದಾರೆ.

ಪತ್ರಲೇಖಾ ಕೂಡ ರಾಜ್ ಕುಮಾರ್ ಹಣೆಯ ಮೇಲೆ ಕುಂಕುಮವಿಟ್ಟಿದ್ದಾರೆ. ಈ ಕ್ಷಣವು ಅಭಿಮಾನಿಗಳ ಗಮನ ಸೆಳೆದಿದ್ದು, ನಿಜವಾದ ಪ್ರೀತಿ ಅಂದ್ರೆ ಇದುವೆ ಎಂದು ವ್ಯಾಪಕವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜ್‌ಕುಮಾರ್ ರಾವ್ ಅವರ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡ ವಿವಾಹದ ವಿಡಿಯೋದಲ್ಲಿ, ಪತ್ರಲೇಖಾ ತನ್ನ ಪತಿಗಾಗಿ ಭಾಷಣ ಮಾಡಿರುವುದನ್ನು ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...