alex Certify ಪ್ಲಾಸ್ಟಿಕ್ ತ್ಯಾಜ್ಯದಿಂದ ಬಟ್ಟೆ ಉತ್ಪಾದಿಸುವ ಕಂಪನಿ ತೆರೆದ 17ರ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ತ್ಯಾಜ್ಯದಿಂದ ಬಟ್ಟೆ ಉತ್ಪಾದಿಸುವ ಕಂಪನಿ ತೆರೆದ 17ರ ಬಾಲಕ..!

ಪರಿಸರದ ಸುರಕ್ಷತೆಯು ನಾಗರೀಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೂ ಕೂಡ ಹಲವಾರು ಮಂದಿ ದಿನನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ, ರಾಜಸ್ಥಾನದ 17 ವರ್ಷದ ಬಾಲಕನೊಬ್ಬ ಶುದ್ಧೀಕರಣ ಪ್ರಕ್ರಿಯೆಗೆ ದೊಡ್ಡ ಕೊಡುಗೆ ನೀಡಿದ್ದಾನೆ.

ʼಮಾಸ್ಕ್ʼ ಜಾಗೃತಿಗಾಗಿ ವಿಶೇಷ ವಿಡಿಯೋ ಪೋಸ್ಟ್ ಮಾಡಿದ ಪುಣೆ ಪೊಲೀಸ್

ಹೌದು, ಆದಿತ್ಯ ಬಂಗೇರ್ ಎಂಬ ಬಾಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವಲ್ಲಿ ತನ್ನ ಪಾತ್ರ ನಿರ್ವಹಿಸಿದ್ದಾನೆ. ಭಿಲ್ವಾರಾ ಜಿಲ್ಲೆಯಲ್ಲಿ ಟ್ರ್ಯಾಶ್ ಟು ಟ್ರೆಷರ್ ಎಂಬ ಕಂಪನಿ ಸ್ಥಾಪಿಸಿದ್ದು, ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಟ್ಟೆಯಾಗಿ ಪರಿವರ್ತಿಸಲಾಗುತ್ತದೆ.

ಕಾಂಚನ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನ ಜವಳಿ ತಯಾರಿಕೆ ಉದ್ಯಮವನ್ನು ನಡೆಸುತ್ತಿರುವ ಆದಿತ್ಯ, ತಾನು 10ನೇ ತರಗತಿಯಲ್ಲಿದ್ದಾಗ ಚೀನಾ ಪ್ರವಾಸಕ್ಕೆ ಹೋಗಿದ್ದರು. ಭಾರತಕ್ಕೆ ಹೊಸ ಫ್ಯಾಬ್ರಿಕ್ ಉತ್ಪಾದನಾ ತಂತ್ರಗಳನ್ನು ತರುವುದು ಪ್ರವಾಸದ ಉದ್ದೇಶವಾಗಿತ್ತು. “ಇಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯವನ್ನು ಧರಿಸಬಹುದಾದ ಬಟ್ಟೆಗಳನ್ನಾಗಿ ಪರಿವರ್ತಿಸುವ ಘಟಕವನ್ನು ವೀಕ್ಷಿಸಿದೆ. ಇದು ಉತ್ತಮ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವುದರ ಜೊತೆಗೆ ಸ್ಥಳೀಯವಾಗಿ ಅನೇಕರಿಗೆ ಉದ್ಯೋಗವನ್ನು ಸೃಷ್ಠಿಸುತ್ತದೆ” ಎಂದು ಆದಿತ್ಯ ಹೇಳಿದ್ದಾರೆ.

ಭಿಲ್ವಾರದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದ ಆದಿತ್ಯ, ಕಂಪನಿಯು PET ದರ್ಜೆಯ ಪ್ಲಾಸ್ಟಿಕ್‌ಗಳಿಂದ ಬಾಳಿಕೆ ಬರುವ ಬಟ್ಟೆಗಳನ್ನು ಉತ್ಪಾದಿಸುತ್ತದೆ ಎಂದು ಹೇಳಿದ್ದಾರೆ. ತ್ಯಾಜ್ಯವನ್ನು ಸ್ಥಳೀಯ ಮೂಲಗಳು ಮತ್ತು ಮನೆಗಳಿಂದ ಸಂಗ್ರಹಿಸಲಾಗುತ್ತದೆ.

ಇದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನಂತರ ಅದನ್ನು ಕತ್ತರಿಸಿ ಉತ್ತಮವಾದ ಪ್ಲಾಸ್ಟಿಕ್ ಫಿಲಾಮೆಂಟ್‌ ಆಗಿ ಕರಗಿಸಲಾಗುತ್ತದೆ. ಬಳಿಕ ಇದನ್ನು ಹತ್ತಿಯೊಂದಿಗೆ ಬೆರೆಸಿ ಫೈಬರ್ ಉತ್ಪಾದಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

2021 ರ ಜನವರಿಯಿಂದ ತನ್ನ ಕಂಪನಿ ಸುಮಾರು 10,000 ಕಿಲೋ ಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತಿದೆ ಎಂದು ಆದಿತ್ಯ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...