alex Certify ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತಯಾಚಿಸಿದ ವಿದ್ಯಾರ್ಥಿ ಸಂಘದ ಮುಖಂಡರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತಯಾಚಿಸಿದ ವಿದ್ಯಾರ್ಥಿ ಸಂಘದ ಮುಖಂಡರು…!

ಚುನಾವಣೆ ಸಮಯ ಬಂದರೆ ಸಾಕು ರಾಜಕಾರಣಿಗಳು ಮನೆ ಮನೆಗೆ ಹೋಗಿ ಮತಯಾಚಿಸುತ್ತಾರೆ. ಹೆಚ್ಚು ಮತ ಪಡೆಯುವುದಕ್ಕಾಗಿ ಮಾಡಬಾರದ ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲಿ ನೋಡಿ ವಿದ್ಯಾರ್ಥಿ ಸಂಘದ ಮುಖಂಡರು, ವಿದ್ಯಾರ್ಥಿನಿಯರು ತಮಗೆ ಮತ ಹಾಕಲಿ ಎಂದು, ಅವರ ಕಾಲಿಗೆ ಬಿದ್ದಿದ್ದಾರೆ. ಈ ಈಗ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಜಸ್ಥಾನದ ಬರಾನ್‌ನಲ್ಲಿ ಇಂಥ ಒಂದು ವಿಲಕ್ಷಣ ಘಟನೆ ನಡೆದಿದೆ. ಇದೊಂದು ಪ್ರಚಾರ ತಂತ್ರವಾಗಿದ್ದು ವಿದ್ಯಾರ್ಥಿ ಸಂಘದ ಮುಖಂಡರು ರಸ್ತೆಯಲ್ಲೇ ಕಾಲೇಜು ಹುಡುಗಿಯರ ಕಾಲಿಗೆ ಬಿದ್ದು, ಸಾಷ್ಟಾಂಗ ನಮಸ್ಕಾರ ಮಾಡಿ ತಮಗೆ ಮತ ಹಾಕುವಂತೆ ಅಂಗಲಾಚುತ್ತಿದ್ದಾರೆ. ಈ ವಿಡಿಯೋ ನೋಡಿದವರೆಲ್ಲ ಈಗ ಶಾಕ್ ಆಗಿದ್ದಾರೆ.

ಎರಡು ವರ್ಷಗಳ ನಂತರ ಶುಕ್ರವಾರ ರಾಜಸ್ಥಾನದ ಕಾಲೇಜು ಒಂದರಲ್ಲಿ ಎಲೆಕ್ಷನ್ ನಡೆಯುತ್ತಿದ್ದು ಗೆಲುವಿಗಾಗಿ ಹಣಾಹಣಿ ನಡೆದಿದೆ. ಉತ್ತಮ ನಾಯಕನಾದವರು ತನ್ನ ಆದರ್ಶ, ವ್ಯಕ್ತಿತ್ವ, ನಡುವಳಿಕೆಯಿಂದ ಜನರ ಮನಸ್ಸಿನಲ್ಲಿ ಒಂದು ಸ್ಥಾನ, ಭರವಸೆ ಗಿಟ್ಟಿಸಿಕೊಂಡು ಮತ ಪಡೆಯಬೇಕು ಹೊರತು ಈ ರೀತಿ ಸಿಕ್ಕ ಸಿಕ್ಕವರ ಕಾಲಿಗೆ ಬಿದ್ದು ಮತ ಪಡೆಯುವುದಲ್ಲ. ಸದ್ಯಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದು, ಅನ್‌ಸೀನ್‌ ಇಂಡಿಯಾ ಅನ್ನೊ ಟ್ಟಿಟ್ಟರ್ ಪುಟದಲ್ಲಿ ಈ ವಿಡಿಯೋ ಶೇರ್‌ ಮಾಡಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...