alex Certify SHOCKING NEWS: ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ಶಾಲೆಯಲ್ಲಿ ಅಫೀಮು ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ಶಾಲೆಯಲ್ಲಿ ಅಫೀಮು ವಿತರಣೆ

ಅಗಸ್ಟ್ 15, ದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ, ಎದೆಯುಬ್ಬಿಸಿಕೊಂಡು 9ನೇ ಬಾರಿ ಧ್ವಜಾರೋಹಣ ಮಾಡಿದ್ದರು. ಸ್ವತಂತ್ರ ಹಬ್ಬ ಪ್ರಯುಕ್ತ ಎಲ್ಲರೂ ಸಿಹಿತಿಂದು ಅಮೃತ ಮಹೋತ್ಸವವನ್ನ ಆಚರಣೆ ಮಾಡಿದರು. ಆದರೆ ರಾಜಸ್ಥಾನದ ಸರ್ಕಾರಿ ಶಾಲೆಯೊಂದರಲ್ಲಿ ಸ್ವಾತಂತ್ರ್ಯದ ದಿನದಂದೇ ಶಾಲೆಯಲ್ಲಿ ಅಫೀಮು ವಿತರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ರಾಜಸ್ಥಾನದ ಸರ್ಕಾರಿ ಶಾಲೆಯೊಂದರಲ್ಲಿ ಅಫೀಮು ಹಂಚಲಾಗಿದೆ. ಕೆಲ ಪಾಖಂಡಿಗಳು ಶಾಲೆಯಲ್ಲೇ ಕುಳಿತು ಅಫೀಮು ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷಯ ಬೆಳಕಿಗೆ ಬಂದ ತಕ್ಷಣವೇ ಶಿಕ್ಷಣಾಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಮಾಧ್ಯಮಗಳಿಗೆ ಸಿಕ್ಕ ಮಾಹಿತಿ ಪ್ರಕಾರ, ಈ ಘಟನೆ ಬಾರ್ಮರ್ ಜಿಲ್ಲೆಯ ಗುಡಮಲಾನಿ ಉಪವಿಭಾಗದಲ್ಲಿರುವ ರಾವಲಿನಾಡಿನಲ್ಲಿ ನಡೆದಿದೆ ಅಂತ ಹೇಳಲಾಗುತ್ತಿದೆ. ಈ ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ ಅದು ಶಾಲೆಯ ಆವರಣ ಅನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಒಂದಿಬ್ಬರು ವಿದ್ಯಾರ್ಥಿಗಳು ಅಲ್ಲಿ ನಡೆದುಕೊಂಡು ಹೋಗುತ್ತಿರುವುದು ಕೂಡಾ ಕಾಣಿಸುತ್ತದೆ. ಸೋಮವಾರ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಳಿಕ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಶಾಲೆಗೆ ಬಾಗಿಲು ಹಾಕಿಕೊಂಡು ಕುಳಿತಾಗ, ಅಫೀಮು ಹಂಚಲಾಗಿದೆ. ಅವರೆಲ್ಲರೂ ಸುಮಾರು ಎರಡು ಗಂಟೆಗಳ ಕಾಲ ಶಾಲಾ ಆವರಣದಲ್ಲಿ ಕುಳಿತಿದ್ದರು ಅಂತ ಹೇಳಲಾಗುತ್ತಿದೆ.

ಶಾಲೆಯಲ್ಲಿ ಅಫೀಮು ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಅವರು ತಕ್ಷಣವೇ ಈ ಘಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಶಾಲೆಗೆ ದೌಡಾಯಿಸಿ ಬಂದಿದ್ದಾರೆ. ಆದರೆ ಅಷ್ಟರೊಳಗಾಗಲೇ ಎಲ್ಲರೂ ಹೊರಟು ಹೋಗಿದ್ದರು. ಇದೇ ವೇಳೆ ಸಿಬಿಇಇಒ ಓಂಪ್ರಕಾಶ್ ವಿಷ್ಣೋಯ್ ಅವರು, ವಿಡಿಯೋ ಬಯಲಿಗೆ ಬಂದಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಹೇಳಿಕೆಗಳನ್ನ ತೆಗೆದುಕೊಳ್ಳಲಾಗುವುದು. ಆ ನಂತರ ವರದಿಯನ್ನ ಗುಡಮಲಾನಿ ಎಸ್‌ಡಿಎಂಗೆ ಸಲ್ಲಿಸಲಾಗುವುದು ಎಂದು ಮಾಧ್ಯಮಕ್ಕೆ ಹೇಳಿದ್ದಾರೆ.

ಈಗಾಗಲೇ ಶಾಲೆಯ ನಾಲ್ಕು ವಿಡಿಯೋಗಳು ಹೊರಬಿದ್ದಿವೆ. ವಿಡಿಯೋದಲ್ಲಿ ಗ್ರಾಮಸ್ಥರು ಶಾಲೆಯ ವರಾಂಡದಲ್ಲಿ ಕುಳಿತಿದ್ದಾರೆ. ಒಬ್ಬ ವ್ಯಕ್ತಿಯು ಕುರ್ಚಿಯ ಮೇಲೆ ಕುಳಿತಿದ್ದಾನೆ, ಅವರು ಹಣದ ವ್ಯವಹಾರಗಳ ಲೆಕ್ಕಪತ್ರವನ್ನು ಪರಿಶೀಲಿಸುವಂತಿದೆ. ರಿಜಿಸ್ಟರ್ನಲ್ಲಿ ಕುಳಿತಿರುವವರ ಸಹಿ ಪಡೆಯುತ್ತಿರುವ ಸರ್ಕಾರಿ ಶಿಕ್ಷಕರೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಿನಲ್ಲಿ ಕೆಲ ವಿದ್ಯಾಮಂದಿರಗಳು ಈಗ ಪಾಪದ ಕೆಲಸಕ್ಕೆ ಬಳಕೆಯಾಗುತ್ತಿರುವುದು ವಿಪರ್ಯಾಸ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...