alex Certify ಶಾಕಿಂಗ್…! ಮಹಿಳೆ ಮೇಲೆ ಮೈದುನ ಸೇರಿ ಐವರಿಂದ ಸಾಮೂಹಿಕ ಅತ್ಯಾಚಾರ, ಗಂಡನನ್ನು ಕಟ್ಟಿಹಾಕಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! ಮಹಿಳೆ ಮೇಲೆ ಮೈದುನ ಸೇರಿ ಐವರಿಂದ ಸಾಮೂಹಿಕ ಅತ್ಯಾಚಾರ, ಗಂಡನನ್ನು ಕಟ್ಟಿಹಾಕಿ ಕೃತ್ಯ

ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗಂಡನನ್ನು ಕಟ್ಟಿಹಾಕಿದ 5 ಮಂದಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಶನಿವಾರ ಬರಾನ್ ನ ಬಾಲಾಜಿ ದೇವಾಲಯಕ್ಕೆ ತೆರಳಿದ್ದ ದಂಪತಿ ಬೈಕ್ ನಲ್ಲಿ ಮನೆಗೆ ತೆರಳುವಾಗ ಘಟನೆ ನಡೆದಿದೆ. ಬರಾನ್ ಮತ್ತು ಆಟ್ರಾ ರಾಜ್ಯ ಹೆದ್ದಾರಿಯಲ್ಲಿ ದಂಪತಿಯನ್ನು ತಡೆದ ಆರೋಪಿಗಳು ಬಲವಂತವಾಗಿ ಸಮೀಪದ ಹೊಲಕ್ಕೆ ಎಳೆದುಕೊಂಡು ಹೋಗಿದ್ದಾರೆ. ಅಲ್ಲಿ ಗಂಡನನ್ನು ಕಟ್ಟಿಹಾಕಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬ ಮಹಿಳೆಯ ಮಾಜಿ ಪತಿಯ ಸಹೋದರ ಎಂದು ಗುರುತಿಸಲಾಗಿದೆ. ದಿನೇಶ್ ಮತ್ತು ಆತನ ಸಹಚರರ ವಿರುದ್ಧ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಹಿಳೆಯ ಹೇಳಿಕೆಯನ್ನು ದಾಖಲಿಸಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ದಿನೇಶ್ ಸಹೋದರರ ಸಂತ್ರಸ್ತ ಮಹಿಳೆಯರು ಮಾಜಿ ಪತಿಯಾಗಿದ್ದಾನೆ. ಈ ಹಿಂದೆ ಮಹಿಳೆ ಮತ್ತು ಆಕೆಯ ಮಾಜಿ ಪತಿಯ ಕುಟುಂಬ ಸದಸ್ಯರು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...