alex Certify ಬೀಳ್ಕೋಡುಗೆ ಸಮಾರಂಭದಲ್ಲಿ ನಂಗಾನಾಚ್; ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಳ್ಕೋಡುಗೆ ಸಮಾರಂಭದಲ್ಲಿ ನಂಗಾನಾಚ್; ಅಶ್ಲೀಲ ನೃತ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಸಸ್ಪೆಂಡ್

ಸಹೋದ್ಯೋಗಿ ನಿವೃತ್ತಿ ಆಗುತ್ತಿದ್ದಾರೆ ಅಂದ್ರೆ, ಅಲ್ಲಿ ಭಾವುಕ ಮಾತುಗಳು, ಹಳೆಯ ದಿನಗಳ ಮೆಲಕು, ನೆನಪಿನ ಕಾಣಿಕೆ, ಇದೆಲ್ಲ ಸಾಮಾನ್ಯವಾಗಿ ಇದ್ದೇ ಇರುತ್ತೆ. ಆದರೆ ರಾಜಸ್ಥಾನದ ಡಿಸ್ಕಾಂ ಅಧಿಕಾರಿಗಳು ನಿವೃತ್ತಿ ಸಮಾರಂಭದಲ್ಲಿ ಸಹೋದ್ಯೋಗಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಎಂಥವರನ್ನೂ ಸಹ ದಂಗು ಮಾಡುವ ಹಾಗಿತ್ತು. ಕಾರಣ ಆ ಕಾರ್ಯಕ್ರಮದಲ್ಲಿ ನಂಗಾ ನಾಚ್ ಮಾಡಲಾಗಿತ್ತು.

ಡಿಸ್ಕಾಂ ಅಧಿಕಾರಿಗಳ ಅಶ್ಲೀಲ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜಸ್ಥಾನದ ಡಿಸ್ಕಾಂ ಅಧಿಕಾರಿಗಳನ್ನ ಈಗಾಗಲೇ ಅಮಾನತು ಮಾಡಲಾಗಿದೆ. ಜೂನ್ 18ರಂದು ವಿಜಿಲೆನ್ಸ್‌ನ ಸೂಪರಿಟೆಂಡಿಂಗ್ ಇಂಜಿನಿಯರ್ ಬಿ.ಎಸ್. ಶೆಖಾವತ್ ಅವರ ನಿವೃತ್ತಿ ಕಾರ್ಯಕ್ರಮದ ಪ್ರಯುಕ್ತ ಪುಷ್ಕರ್‌ನಲ್ಲಿ ಮಹಿಳಾ ನೃತ್ಯಗಾರರನ್ನ ಕರೆಸಲಾಗಿತ್ತು. ಈ ಅಶ್ಲೀಲ ನೃತ್ಯದ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಆರಂಭವಾಗಿ ಬೆಳಿಗ್ಗೆ 3 ಗಂಟೆಯವರೆಗೆ ನಡೆಸಲಾಯಿತು.

ಮದ್ಯದ ಅಮಲಿನಲ್ಲಿ ಮಹಿಳೆಯರೊಂದಿಗೆ ಅಧಿಕಾರಿಗಳು ಕುಣಿದು ಕುಪ್ಪಳಿಸುತ್ತಿರುವುದು ಕಂಡುಬಂದಿದೆ. ಬಿ.ಎಸ್ ಸೋನಿ ಮತ್ತು ಶೇಖಾವತ್ ಅವರನ್ನ ಹೊರತುಪಡಿಸಿ ಇತರ ಅಧಿಕಾರಿಗಳು ಮಹಿಳೆಯರೊಂದಿಗೆ ಅಶ್ಲೀಲ ನೃತ್ಯ ಮಾಡುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶುಕ್ರವಾರ ತಡರಾತ್ರಿ ಬಿ.ಎಸ್. ಸೋನಿ ಅವರನ್ನ ಅಮಾನತುಗೊಳಿಸಿದೆ. ಇನ್ನು ಪುಷ್ಕರ್ ಹೋಟೆಲ್ಗೆ ಪಾರ್ಟಿಗೆ ಹೋಗುವಾಗ ಅಧಿಕಾರಿಗಳು ಸರ್ಕಾರಿ ವಾಹನ ಬಳಸಿರುವುದು ಬೆಳಕಿಗೆ ಬಂದಿದೆ. ಇವೆಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಬಿ.ಎಸ್. ಸೋನಿ ಅವರನ್ನು ಅಮಾನತುಗೊಳಿಸಲಾಗಿದೆ. ಹಾಗೂ ಇನ್ನಷ್ಟು ತನಿಖೆ ನಡೆಸಲು ತನಿಖಾ ಸಮಿತಿಯನ್ನ ಕೂಡ ಈಗಾಗಲೇ ರಚಿಸಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...