alex Certify ಭಾಷಣದ ವೇಳೆ ಕೈ ಕೊಟ್ಟ ಮೈಕ್; ಸಿಟ್ಟಿಗೆದ್ದು ಡಿಸಿಯತ್ತ ಮೈಕ್ ಎಸೆದ ಸಿಎಂ ಅಶೋಕ್ ಗೆಹ್ಲೋಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಷಣದ ವೇಳೆ ಕೈ ಕೊಟ್ಟ ಮೈಕ್; ಸಿಟ್ಟಿಗೆದ್ದು ಡಿಸಿಯತ್ತ ಮೈಕ್ ಎಸೆದ ಸಿಎಂ ಅಶೋಕ್ ಗೆಹ್ಲೋಟ್

ತಮ್ಮ ಮೈಕ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೋಪಗೊಂಡ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆಯೇ ಬಾರ್ಮರ್ ಜಿಲ್ಲಾಧಿಕಾರಿಯತ್ತ ಮೈಕ್ ಎಸೆದರು.

ಸಿಎಂ ಅಶೋಕ್ ಗೆಹ್ಲೋಟ್ ಬಾರ್ಮರ್ ಸರ್ಕ್ಯೂಟ್ ಹೌಸ್‌ನಲ್ಲಿ ಮಹಿಳೆಯರ ಗುಂಪನ್ನು ಉದ್ದೇಶಿಸಿ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಪ್ರತಿಕ್ರಿಯೆ ಸಂಗ್ರಹಿಸಲು ಮಾತನಾಡುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಗೆಹ್ಲೋಟ್ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಮೈಕ್ ಕೊಟ್ಟಿದೆ. ಪದೇ ಪದೇ ಇದೇ ರೀತಿ ತೊಂದರೆ ನೀಡ್ತಿದ್ದರಿಂದ ಸಿಟ್ಟಿಗೆದ್ದ ಅವರು ತಾಳ್ಮೆ ಕಳೆದುಕೊಂಡು ಮೈಕ್ ಅನ್ನು ಡಿಸಿಯತ್ತ ಎಸೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...