alex Certify ರೈಲಿನಲ್ಲಿ ಇನ್ಮುಂದೆ ಹರಡಲ್ಲ ʼಕೊರೊನಾʼ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಇನ್ಮುಂದೆ ಹರಡಲ್ಲ ʼಕೊರೊನಾʼ ವೈರಸ್

ಕೊರೊನಾದಿಂದ ರಕ್ಷಣೆ ಪಡೆಯಲು, ಲಸಿಕೆ, ಮಾಸ್ಕ್, ಸಾಮಾಜಿಕ ಅಂತರ ಬಹಳ ಮುಖ್ಯ. ಜನರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕಾಗಿದೆ. ಜನರ ಸುರಕ್ಷತೆಗೆ ಸರ್ಕಾರ ಕೂಡ ಅನೇಕ ಕ್ರಮ ಕೈಗೊಳ್ಳುತ್ತಿದೆ. ಭಾರತೀಯ ರೈಲ್ವೆ, ರೈಲು ಪ್ರಯಾಣಿಕರನ್ನು ಕೊರೊನಾದಿಂದ ಸುರಕ್ಷಿತವಾಗಿಡಲು ಮಹತ್ವದ ಹೆಜ್ಜೆಯಿಟ್ಟಿದೆ.

ಉತ್ತರ ರೈಲ್ವೆಯ ದೆಹಲಿ ವಿಭಾಗವು ಯುವಿಸಿ ರೋಬೋಟ್ ತಂತ್ರಜ್ಞಾನವನ್ನು ಬಳಸಿ ರೈಲುಗಳನ್ನು ಸೋಂಕು ರಹಿತಗೊಳಿಸಲು ಆರಂಭಿಸಿದೆ. ಈ ತಂತ್ರವು ಕೊರೊನಾ ವೈರಸ್‌ನ ನ್ಯೂಕ್ಲಿಯಸ್ ನಾಶಪಡಿಸುತ್ತದೆ. ಇದರಿಂದ ವೈರಸ್ ರೈಲು ಬೋಗಿಗಳಲ್ಲಿ ಹರಡುವುದಿಲ್ಲ.

ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ, ರೈಲು ಸಂಖ್ಯೆ 02004 – ಲಕ್ನೋ ಶತಾಬ್ದಿ ವಿಶೇಷ ರೈಲಿನಲ್ಲಿ  ಜುಲೈ 2021 ರಿಂದ ಬಳಸಲಾಗ್ತಿದೆ. ರಿಮೋಟ್ ಕಂಟ್ರೋಲ್ಡ್ ಯಂತ್ರವನ್ನು ಬಳಸಿಕೊಂಡು ರೈಲನ್ನು ಸಂಪೂರ್ಣ ಸ್ವಯಂಚಾಲಿತವಾಗಿ ಸೋಂಕು ರಹಿತಗೊಳಿಸಲಾಗುತ್ತಿದೆ.

ಈ ಪ್ರಕ್ರಿಯೆಯಲ್ಲಿ ಯಾವುದೇ ಮಾನವನ ಪಾಲ್ಗೊಳ್ಳುವಿಕೆ ಇರುವುದಿಲ್ಲ. ಯುವಿಸಿ ತಂತ್ರಜ್ಞಾನವು ಸಂಪೂರ್ಣವಾಗಿದೆ. ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ಅಶುತೋಷ್ ಗಂಗಾಲ್, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನಲೆಯಲ್ಲಿ, ರೈಲ್ವೇಯು ಕ್ರಾಂತಿಕಾರಿ ಯುವಿಸಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಆಪರೇಟರ್ ಮತ್ತು ಸುತ್ತಮುತ್ತಲಿನ ಸುರಕ್ಷತೆಗಾಗಿ ವೈರ್ ಲೆಸ್ ರಿಮೋಟ್ ಕಂಟ್ರೋಲ್ ಸಹಾಯದಿಂದ ಸಾಧನವನ್ನು ನಿರ್ವಹಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...