alex Certify BIG NEWS: ಆಸ್ಪತ್ರೆಯಿಂದ ಹೊರಬರುತ್ತಿದ್ದ ತಾಯಿ-ಮಗನ ಮೇಲೆ ಬೀದಿನಾಯಿ ದಾಳಿ; ಇಬ್ಬರ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಸ್ಪತ್ರೆಯಿಂದ ಹೊರಬರುತ್ತಿದ್ದ ತಾಯಿ-ಮಗನ ಮೇಲೆ ಬೀದಿನಾಯಿ ದಾಳಿ; ಇಬ್ಬರ ಸ್ಥಿತಿ ಗಂಭೀರ

ರಾಯಚೂರು: ಆಸ್ಪತ್ರೆಯಿಂದ ಹೊರಬರುತ್ತಿದ್ದ ತಾಯಿ ಹಾಗೂ ಮಗನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.

ಆಸ್ಪತ್ರೆಯಿಂದ ಹೊರಬಂದು ರಸ್ತೆಯಲ್ಲಿ ನಿಂತಿದ್ದ ಮಗನ ಮೇಲೆ ಏಕಾಏಕಿ ಬೀದಿನಾಯಿ ದಾಳಿ ನಡೆಸಿದೆ. ಮಗ ಕೂಗಾಡುತಿದ್ದಂತೆ ತಕ್ಷಣ ಬಂದ ತಾಯಿ ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ತಾಯಿ ಮೇಲೂ ನಾಯಿ ದಾಳಿ ನಡೆಸಿದೆ. ಸ್ಥಳೀಯರು ಬಂದು ನಾಯಿಗೆ ಬಡಿಗೆಯಿಂದ ಹೊಡೆದರೂ ತಪ್ಪಿಸಲು ಸಾಧ್ಯವಾಗಿಲ್ಲ.

ತಾಯಿ ಮಗ ಇಬ್ಬರನ್ನು ನಾಯಿ ಕಚ್ಚಿ ಗಾಯಗೊಳಿಸಿದೆ. ಗಂಗಮ್ಮ (36), ಮಗ ಪ್ರೀತಂ (15) ಗಾಯಾಳುಗಳು. ಸದ್ಯ ಇಬ್ಬರನ್ನೂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...