alex Certify ಮಹಿಳಾ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ; ವಾರ್ಡನ್ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ; ವಾರ್ಡನ್ ಸಸ್ಪೆಂಡ್

ರಾಯಚೂರು: ರಾಯಚೂರಿನ ಬಿಸಿಎಂ ಮಹಿಳಾ ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೇಲ್ ವಾರ್ಡನ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಹಾಸ್ಟೇಲ್ ವಾರ್ಡನ್ ಗಿರಿಜಾ ಅಮಾನತುಗೊಂಡವರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ್, ಕರ್ತವ್ಯಲೋಪ ಹಿನ್ನೆಲೆಯಲ್ಲಿ ವಾರ್ಡನ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಹಾಸ್ಟೇಲ್ ನಲ್ಲಿ ನೀರಿನ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದರೂ ನೀರು ಪೂರೈಕೆ ಮಾಡದೇ ಬೇಜವಾಬ್ದಾರಿ ಮೆರೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರತಿಭಟಿಸಿದ್ದ ವಿದ್ಯಾರ್ಥಿನಿಯರನ್ನು ಹಾಸ್ಟೇಲ್ ನಿಂದ ಹೊರ ಹಾಕೋದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ವಾರ್ಡನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಹಾಸ್ಟೆಲ್ ಪ್ರಭಾರಿ ವಾರ್ಡನ್ ಆಗಿ ಈರಮ್ಮ ಪತ್ತಾರ ಅವರನ್ನು ನೇಮಕ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...