alex Certify ವಿಮಾನ ಸೇವೆಗೆ ಬಗ್ಗೆ ಕೋಪ….! ʼವಿಸ್ತಾರʼಕ್ಕೆ ಬದಲು ಹುಡುಗಿಗೆ ಟ್ಯಾಗ್ ಮಾಡಿದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಸೇವೆಗೆ ಬಗ್ಗೆ ಕೋಪ….! ʼವಿಸ್ತಾರʼಕ್ಕೆ ಬದಲು ಹುಡುಗಿಗೆ ಟ್ಯಾಗ್ ಮಾಡಿದ ನಟ

ನಟ ರಾಹುಲ್ ಬೋಸ್ ರಾಂಗ್ ಟ್ಯಾಗ್ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಹದ್ದಿನ ಕಣ್ಣಿನ ನೆಟ್ಟಿಗರು ಸೆಲೆಬ್ರಿಟಿಗಳ ತಪ್ಪುಗಳು ಸಿಕ್ಕಾಗ ಸುಮ್ಮನೆ ಬಿಡುವವರೇ ಅಲ್ಲ.

ನಟ ರಾಹುಲ್ ಬೋಸ್ ಅವರು ಹಲವು ಕಾರಣಗಳಿಗಾಗಿ ವಿಸ್ತಾರಾ ಏರ್ಲೈನ್ಸ್ ವಿರುದ್ಧ ಕೋಪ ತೀರಿಸಿಕೊಳ್ಳಲು ಟ್ವೀಟರ್ ಬಳಸಿಕೊಂಡರು. ಆದರೆ, ಏರ್ಲೈನ್ ಪೇಜ್ ಟ್ಯಾಗ್ ಮಾಡುವ ಬದಲು, ವಿಸ್ತಾರಾ ಎಂಬ ಮಹಿಳೆಯನ್ನು ಪೋಸ್ಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.

ರಾಹುಲ್ ಬೋಸ್ ಅಹಮದಾಬಾದ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನಯಾನ ಸಂಸ್ಥೆ ಒದಗಿಸುವ ಸೇವೆಗಳ ಬಗ್ಗೆ ಅಸಮಾಧಾನ ಹೊಂದಿದ್ದರು. ಉದಾಸೀನತೆ ತೋರುವ ಗ್ರೌಂಡ್ ಸ್ಟಾಫ್, ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಲಾಂಜ್ ವ್ಯವಸ್ಥೆಗೆ ಅವಕಾಶ ಇಲ್ಲದಿರುವುದು, ತಡವಾಗಿ ಬೋರ್ಡಿಂಗ್, ತಿನ್ನಲಾಗದ ಆಹಾರ ಕೊಡುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ವಾರದಲ್ಲಿ ನಾಲ್ಕು ಬಾರಿ ವಿಸ್ತಾರಾವನ್ನು ಬಳಸಿದ್ದು, ಎಲ್ಲಾ ಬಾರಿಯೂ ಸರಿಯಾದ ಸೇವೆ ಸಿಕ್ಕಿಲ್ಲ ಎಂದು ಬೇಸರಿಸಿದ್ದಾರೆ. ಆದರೆ, ಈ ಎಲ್ಲಾ ಅಂಶಗಳನ್ನು ವಿಸ್ತಾರಾ ಎಂಬ ಮಹಿಳೆಯನ್ನು ತಪ್ಪಾಗಿ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಆ ಮಹಿಳೆ ತನ್ನ ಟ್ವಿಟರ್ ಬಯೋದಲ್ಲಿ “ವಿಮಾನಯಾನ ಸಂಸ್ಥೆ ಅಲ್ಲ” ಎಂದು ನಿರ್ದಿಷ್ಟವಾಗಿ ಹೇಳಿದ್ದಾರೆ.

ಏರ್ ವಿಸ್ತಾರಾ ಈ ವಿಷಯವನ್ನು ಅರಿತು ಬೋಸ್ ಅವರ ಪೋಸ್ಟ್‌ಗೆ ಉತ್ತರಿಸಿದೆ. “ಹಾಯ್ ಮಿಸ್ಟರ್ ಬೋಸ್, ಪ್ರಸ್ತುತ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾವು ಲಾಂಜ್ ಹೊಂದಿಲ್ಲ, ಸೇವೆಯನ್ನು ಉತ್ತಮಗೊಳಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಏರ್ಲೈನ್ಸ್ ಕ್ಷಮೆಯಾಚನೆಯಿಂದ ನಟ ಇನ್ನೂ ತೃಪ್ತರಾಗಲಿಲ್ಲ.

ಅವರು ಮತ್ತೊಂದು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿ “ನೀವು ಸ್ಪಷ್ಟವಾಗಿ ವಿಷಾದಿಸುವುದಿಲ್ಲ. ಗ್ರೌಂಡ್ ಸ್ಟಾಫ್ (ನಾನು ಹೆಸರುಗಳನ್ನು ಉಲ್ಲೇಖಿಸಲು ಬಯಸುವುದಿಲ್ಲ) ವರ್ತನೆಗೆ ಬೇಸರಗೊಂಡಿದ್ದೇನೆ” ಎಂದಿದ್ದಾರೆ.

ವಿಮಾನಯಾನ ಸಂಸ್ಥೆಯು ಮತ್ತೆ ಪ್ರತಿಕ್ರಿಯೆ ನೀಡಿ, ವಿಷಾದ ವ್ಯಕ್ತಪಡಿಸುವ ಜೊತೆಗೆ ನಮ್ಮ ತಂಡದೊಂದಿಗೆ ಪರಿಶೀಲಿಸಲು ಸ್ವಲ್ಪ ಸಮಯವನ್ನು ಕೋರುತ್ತೇವೆ. ದಯವಿಟ್ಟು ಸಮಯ ನೀಡಿ ಎಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...