alex Certify ಕೊರೊನಾ ಲಸಿಕೆ ವಿರೋಧಿಯಾಗಿದ್ದ ರೇಡಿಯೋ ಹೋಸ್ಟ್​ ಕೋವಿಡ್​ ಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ವಿರೋಧಿಯಾಗಿದ್ದ ರೇಡಿಯೋ ಹೋಸ್ಟ್​ ಕೋವಿಡ್​ ಗೆ ಬಲಿ

ಕೋವಿಡ್​ 19ನಿಂದ ಸಾವನ್ನಪ್ಪಿದ ಟೆನಿಸಿಯ 61 ವರ್ಷದ ರೇಡಿಯೋ ಹೋಸ್ಟ್​​ ಕೊರೊನಾ ಲಸಿಕೆಯ ಮೇಲೆ ನಂಬಿಕೆಯನ್ನೇ ಹೊಂದಿರಲಿಲ್ಲ. ನ್ಯಾಶ್ವಿಲ್ಲೆ ರೇಡಿಯೋ ಸ್ಟೇಷನ್​ ಸೂಪರ್ ಟಾಕ್​ 99.7 ಡಬ್ಲೂಟಿಎಸ್​​ ಆಗಸ್ಟ್​ 21ರಂದು ಫಿಲ್​​ ವಾಲೆಂಟೈನ್ಸ್​ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿ ನೀಡಿದೆ.

ಫಿಲ್​ ಕೊರೊನಾ ಲಸಿಕೆ ಬಗ್ಗೆ ಸಂಶಯ ಹೊಂದಿದ್ದರು. ಕೋವಿಡ್​ 19 ಸೋಂಕಿಗೆ ಒಳಗಾಗಿದ್ದ ಫಿಲ್ ಆಸ್ಪತ್ರೆಗೆ ದಾಖಲಾಗುವ ಮುನ್ನ ಇದರಿಂದ ಪಾರಾಗಲು ಏನಾದರೂ ದಾರಿ ಇದೆಯೇ ಎಂದು ಕೇಳಿದ್ದರಂತೆ.

ಇದಕ್ಕೆ ವೈದ್ಯರು ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಕೋವಿಡ್​ ನಿಂದ ತಾನು ಸಾಯೋದಿಲ್ಲ ಎಂದು ನಂಬಿದ್ದ ಫಿಲ್​ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದರು.

ಫಿಲ್​ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಅವರನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಈ ವೇಳೆ ಫಿಲ್​ ತನ್ನ ಸಹೋದರ ಮಾರ್ಕ್​ ಬಳಿಕ ಲಸಿಕೆ ಹಾಕಿಸಿಕೊಳ್ಳದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೀಗಾಗಿ ಯಾವುದೇ ರಾಜಕೀಯ ಸಿದ್ಧಾಂತದ ಬಗ್ಗೆ ಚಿಂತಿಸೋದನ್ನು ಬಿಟ್ಟು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮಾರ್ಕ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...