alex Certify 4 ವರ್ಷದ ಹುಡುಗಿ ಸಮಯಪ್ರಜ್ಞೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ವರ್ಷದ ಹುಡುಗಿ ಸಮಯಪ್ರಜ್ಞೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಫ್ಲಾರಿಡಾದ ನಾಲ್ಕು ವರ್ಷದ ಪುಟ್ಟಿ ಅಮೇಲಿಯಾ ತನ್ನ ಮನೆಯ ಅಡುಗೆ ಮನೆಯಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಕೂಡಲೇ ಈ ಬಗ್ಗೆ ತನ್ನ ತಂದೆಗೆ ಅಲರ್ಟ್ ಮಾಡಿದ ಘಟನೆ ವಿಡಿಯೋದಲ್ಲಿ ರೆಕಾರ್ಡ್ ಆಗಿ ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

’ಫ್ರೋಜ಼ನ್’ ಹಾಡೊಂದನ್ನು ಕೇಳಿಕೊಂಡು ಮನೆ ಸುತ್ತ ಅಡ್ಡಾಡಿಕೊಂಡು ಓಡಾಡುತ್ತಿದ್ದ ಅಮೇಲಿಯಾ, ಅಡುಗೆ ಮನೆಯಲ್ಲಿ ಬೆಂಕಿ ಕಾಣುತ್ತಲೇ, “ಫೈರ್‌. ಓಹ್ ನೋ. ಅಪ್ಪ ನನ್ನನ್ನು ಕೊಂದುಬಿಡುತ್ತಾನೆ” ಎಂದು, “ಯೋಚಿಸು, ಯೋಚಿಸು” ಎನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಕಾಲೇಜು ಆರಂಭದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಖುಷಿ ಸುದ್ದಿ

ಬ್ರಶ್ ಮಾಡುತ್ತಿದ್ದ ತನ್ನ ತಂದೆ ಡೇನಿಯಲ್‌ಗೆ ಕೂಡಲೇ ವಿಚಾರ ಮುಟ್ಟಿಸಿದ್ದಾಳೆ ಅಮೇಲಿ. ಆ ಜಾಗಕ್ಕೆ ಓಡೋಡಿ ಬಂದ ಡೇನಿಯಲ್ ಕೂಡಲೇ, ಬೆಂಕಿಗೆ ಕಾರಣವಾಗಿದ್ದ ಏರ್‌ಫ್ರೈಯರ್‌ ಅನ್ನು ಪೂಲ್‌ಗೆ ಎಸೆದಿದ್ದಾರೆ.

ತನ್ನ ಮುದ್ದಿನ ಮಗಳು ತನ್ನತ್ತ ಓಡೋಡಿ ಬಂದು ಅಲರ್ಟ್ ಮಾಡದೇ ಇದ್ದಿದ್ದರೆ ಕನಿಷ್ಠ ಪಕ್ಷ ಅಡುಗೆ ಮನೆಯಾದರೂ ಹೊತ್ತಿ ಉರಿಯುತ್ತಿತ್ತು ಎಂದು ಡೇನಿಯಲ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...