alex Certify ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ……… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ………

ದಕ್ಷಿಣ ಭಾರತದ ಕೆಲವೊಂದು ಚಲನಚಿತ್ರಗಳು ಹಿಂದಿ ಬೆಲ್ಟ್‌ನ ಪ್ರೇಕ್ಷಕರಿಗೂ ಇಷ್ಟವಾಗುವ ಅನೇಕ ನಿದರ್ಶನಗಳ ಸಾಲಿಗೆ ಸೇರಿರುವ ಹೊಸ ಉದಾಹರಣೆ ಅಲ್ಲು ಅರ್ಜುನ್‌ರ ’ಪುಷ್ಪ’.

ಇಲ್ಲಿನ ಹಿಟ್ ಚಿತ್ರಗಳನ್ನು ಆಯ್ದುಕೊಂಡು ಅವುಗಳನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಗೋಲ್ಡ್‌ಮೈನ್ಸ್ ಟೆಲಿಫಿಲಂಸ್‌‌ನ ಮನಿಶ್ ಶಾ ಈ ಕುರಿತು ಮಾತನಾಡಿ, “ಕಂಟೆಂಟ್‌ಗೆ ಯಾವುದೇ ಭಾಷೆ ಇಲ್ಲ. ನಿಮ್ಮಲ್ಲಿ ಒಳ್ಳೆಯ ಕಂಟೆಂಟ್ ಇದ್ದಲ್ಲಿ ಜನರು ಎಂಜಾಯ್ ಮಾಡುತ್ತಾರೆ. ಯಾರು ಹೀರೋಗಳು ಅಥವಾ ಹೀರೋಯಿನ್‌ಗಳು ಎಂದು ಪ್ರೇಕ್ಷಕರು ಯೋಚಿಸುವುದಿಲ್ಲ,” ಎನ್ನುತ್ತಾರೆ.

ʼಫೆಬ್ರವರಿ-ಮಾರ್ಚ್ʼ ತಿಂಗಳ ಡಯಟ್ ನಲ್ಲಿರಲಿ ಈ ಹಣ್ಣು, ತರಕಾರಿ

2016ರಲ್ಲಿ ಬಿಡುಗಡೆಯಾದ ಅಲ್ಲು ಅರ್ಜುನ್‌ರ ’ಸರ‍್ರೈನೋಡು’ ಚಿತ್ರವು ಹಿಂದಿಗೆ ಡಬ್ ಆದ ಬಳಿಕ 2021ರಲ್ಲೂ ಸಹ ಅದರ ಟಿಆರ್‌ಪಿ ಬಾಹುಬಲಿ ಚಿತ್ರಕ್ಕಿಂತಲೂ ದೊಡ್ಡದಿದೆ ಎಂದು ಬಾರ್ಕ್ ವರದಿ ತಿಳಿಸುತ್ತದೆ.

“ಡಿಜೆಗೆ ಯೂಟ್ಯೂಬ್‌ನಲ್ಲಿ 400 ದಶಲಕ್ಷ ವೀಕ್ಷಣೆಗಳು, ಸರ‍್ರೈನೋಡುಗೆ 350 ದಶಲಕ್ಷ ಮೀರಿದ ವೀಕ್ಷಣೆಗಳು, ಸನ್ ಆಫ್ ಸತ್ಯಮೂರ್ತಿಗೆ 200 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು, ರೇಸ್ ಗುರ‍್ರಂಗೆ 100 ದಶಲಕ್ಷಕ್ಕಿಂತ ಅಧಿಕ ವೀಕ್ಷಣೆಗಳು ಹೀಗೆ ಪಟ್ಟಿಗೆ ಅಂತ್ಯವೇ ಇಲ್ಲ,” ಎನ್ನುವ ಮನೀಶ್ ಇದೀಗ ಅಲ್ಲು ಅರ್ಜುನ್‌ರ ಪುಷ್ಪ ಚಿತ್ರದ ಹಿಂದಿ ಡಬ್‌ ಅವತರಣಿಕೆಯ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಚಿತ್ರದ ಹಿಂದಿ ಅವತರಣಿಕೆ ಕಳೆದ ಡಿಸೆಂಬರ್‌ನಲ್ಲಿ 1,600 ಪರದೆಗಳ ಮೇಲೆ ಬಿಡುಗಡೆಯಾಗಿದ್ದು, ಕೋವಿಡ್ ಮೂರನೇ ಅಲೆಯ ನಡುವೆಯೂ, ಏಳು ವಾರಗಳ ಬಳಿಕವೂ ಇನ್ನೂ 1000 ಪರದೆಗಳ ಮೇಲೆ ಮಿಂಚುತ್ತಿದೆ ಎಂದು ತಿಳಿಸಿದ್ದಾರೆ.

“ಚಿತ್ರವು ದೊಡ್ಡ ಹಿಟ್ ಆಗಲಿದೆ ಎಂದು ನಿರೀಕ್ಷಿಸಿದ್ದೆವು; ಅಲ್ಲು ಅರ್ಜುನ್ ದೊಡ್ಡ ಸ್ಟಾರ್‌ ಎಂದು ನಮಗೆ ಗೊತ್ತು. ಹಾಗಾಗಿ ಈ ಚಿತ್ರ ತನ್ನ ವೀಕ್ಷಕರನ್ನು ತಲುಪಿದಾಗ ನಮಗೆ ಅಚ್ಚರಿಯಾಗಿರಲಿಲ್ಲ. ಓಟಿಟಿಯಲ್ಲಿ ಬಿಡುಗಡೆಯಾದ ಬಳಿಕವೂ ಚಿತ್ರವು ಈಗಲೂ ಬಾಕ್ಸ್‌ ಆಫಿಸ್‌ನಲ್ಲಿ ತೋರುತ್ತಿರುವ ಅಬ್ಬರ ಅಚ್ಚರಿ ಮೂಡಿಸುತ್ತಿದೆ. ಯಾರೂ ಸಹ ಇದನ್ನು ನಿರೀಕ್ಷೆ ಮಾಡಿರಲಿಲ್ಲ,” ಎನ್ನುತ್ತಾರೆ ಮನೀಶ್.

ಪುಷ್ಪ ಹಿಂದಿ ಅವತರಣಿಕೆಯೇ 100 ಕೋಟಿ ರೂ.ಗಳ ಬಾಕ್ಸ್‌ ಆಫೀಸ್ ಕಲೆಕ್ಷನ್ ಕಂಡಿದೆ. ಈ ಸಾಧನೆಗೈದ ದಕ್ಷಿಣ ಭಾರತದ ಐದನೇ ಚಿತ್ರ ಇದಾಗಿದೆ. ಈ ಮುನ್ನ ಬಾಹುಬಲಿ 1 & 2 ಹಾಗೂ ಸಾಹೋ ಚಿತ್ರಗಳು 100 ಕೋಟಿ ರೂ. ಮೀರಿದ ಕಲೆಕ್ಷನ್ ಕಂಡಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...