alex Certify ಪುಷ್ಪ-2 ಸಿನಿಮಾದ ಹೊಸ ಪೋಸ್ಟರ್‌ ಔಟ್: ಫಹಾದ್ ಫಾಸಿಲ್ ಸೇಡಿನ ಮುಖ ಅನಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪ-2 ಸಿನಿಮಾದ ಹೊಸ ಪೋಸ್ಟರ್‌ ಔಟ್: ಫಹಾದ್ ಫಾಸಿಲ್ ಸೇಡಿನ ಮುಖ ಅನಾವರಣ

ಟಾಲಿವುಡ್ ನಟ ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯ ಪುಷ್ಪಾ-2 ಸಿನಿಮಾದಲ್ಲಿ ಫಹದ್ ಫಾಸಿಲ್ ಅವರ ಬನ್ವರ್ ಸಿಂಗ್ ಹೊಸ ಕ್ಯಾರೆಕ್ಟರ್ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮುಖ್ಯ ಖಳನಾಯಕನ ಪೋಸ್ಟರ್ ಹಂಚಿಕೊಳ್ಳಲಾಗಿದ್ದು, ಫಹಾದ್ ಫಾಸಿಲ್ ರ ಸೇಡಿನ ಮುಖವನ್ನು ತೋರಿಸಲಾಗಿದೆ.

ಪುಷ್ಪಾ-2 ಸಿನಿಮಾಗಾಗಿ ತ್ವರಿತ ಗತಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇ.40 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಎರಡನೇ ಸೀಕ್ವೆಲ್ ನಲ್ಲಿ ಭನ್ವರ್ ಸಿಂಗ್ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ. ಹೀಗಾಗಿ ಪುಷ್ಪಾ ಸಿನಿಮಾ ತಂಡ ಫಹಾದ್ ಫಾಸಿಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ

ಫಹಾದ್ ಫಾಸಿಲ್ ಅವರ ಪೋಸ್ಟರ್ ಅನ್ನು ಆಗಸ್ಟ್ 8 ರಂದು ಚಿತ್ರತಂಡ ಅನಾವರಣಗೊಳಿಸಿತು. ಹೊಸ ಸ್ಟಿಲ್ ಅಭಿಮಾನಿಗಳಿಗೆ ಮೊದಲ ಚಿತ್ರದಲ್ಲಿ ನಟನ ಪ್ರವೇಶವನ್ನು ನೆನಪಿಸುತ್ತದೆ. ತಲೆ ಬೋಳಾಗಿದ್ದು, ಬಾಯಿಯಲ್ಲಿ  ಸಿಗರೇಟ್ ಇಟ್ಟುಕೊಂಡು ನಿರ್ಭಯವಾಗಿ ತಿರುಗುತ್ತಾನೆ. ಪುಷ್ಪ: ದಿ ರೈಸ್‌ನಲ್ಲಿ ಫಹಾದ್‌ನ ಪಾತ್ರವನ್ನು ಅದೇ ರೀತಿಯಲ್ಲಿ ಪರಿಚಯಿಸಲಾಗಿದೆ.

ಪುಷ್ಪ-2 ಸಿನಿಮಾದಲ್ಲಿ ಎರಡು ನಟನಾ ಶಕ್ತಿ ಕೇಂದ್ರಗಳ ನಡುವಿನ ಮುಖಾಮುಖಿಯನ್ನು ಚಿತ್ರದ ತಯಾರಕರು ಹೆಚ್ಚು ನಿರೀಕ್ಷಿಸುತ್ತಿದ್ದಾರೆ. ವರದಿಗಳ ಪ್ರಕಾರ, ತಯಾರಕರು ಮುಂದಿನ ಭಾಗದ ಚಿತ್ರೀಕರಣವನ್ನು ವೇಗವಾಗಿ ನಡೆಸುತ್ತಿದ್ದಾರೆ. ಶೇ. 40 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...