alex Certify ಹೃದಯಸ್ಪರ್ಶಿಯಾಗಿದೆ ಅಮ್ಮ – ಮಗನ ಪರಸ್ಪರ ಸೆಲ್ಯೂಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಸ್ಪರ್ಶಿಯಾಗಿದೆ ಅಮ್ಮ – ಮಗನ ಪರಸ್ಪರ ಸೆಲ್ಯೂಟ್‌

ಗುಜರಾತ್‌ನ ಅರಾವಳ್ಳಿಯ ಡಿಎಸ್‌ಪಿ ವಿಶಾಲ್ ರಬಾರಿ ಹಾಗೂ ಅವರ ತಾಯಿ, ಎಎಸ್‌ಐ ಮದೂಬೆನ್ ರಬಾರಿ ಸ್ವಾತಂತ್ರ‍್ಯೋತ್ಸದ ಸಂದರ್ಭದಲ್ಲಿ ಪರಸ್ಪರ ಸಲ್ಯೂಟ್‌ ಮಾಡುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ.

ಜುನಾಗಡ್ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ‍್ಯೋತ್ಸವದ ಸಂದರ್ಭದಲ್ಲಿ ಅಮ್ಮ-ಮಗನ ಈ ಚಿತ್ರ ನೆಟ್ಟಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಎಟಿಎಂನಲ್ಲಿ ಹಣ ಇರೋದಿಲ್ಲವೇ..? ಹಾಗಾದಲ್ಲಿ ಬ್ಯಾಂಕ್​​ ಗೆ ವಿಧಿಸಬಹುದು 10,000 ರೂ. ದಂಡ..!

ಈ ಫೋಟೋವನ್ನು ಟ್ವೀಟ್ ಮಾಡಿರುವ ಗುಜರಾತ್‌ ಲೋಕಸೇವಾ ಆಯೋಗದ ಚೇರ್ಮನ್ ದಿನೇಶ್‌ ದಾಸಾ, “ಒಬ್ಬ ಎಎಸ್‌ಐ ತಾಯಿಗೆ ಡಿಎಸ್‌ಪಿ ಆಗಿರುವ ತನ್ನ ಪುತ್ರನನ್ನು ನೋಡುವುದಕ್ಕಿಂತ ಸಂತೃಪ್ತಿ ಕೊಡುವ ವಿಚಾರ ಬೇರೇನಿದೆ. ವರ್ಷಗಳ ಬದ್ಧತೆ ಹಾಗು ತಾಯ್ತನದ ಮಮತೆಗಳನ್ನು ಪರಸ್ಪರ ಪ್ರೀತಿಯಿಂದ ಹಂಚಿಕೊಳ್ಳುತ್ತಿದ್ದಾರೆ…!! ಜಿಪಿಎಸ್‌ಸಿ ಈ ಪರಿಪೂರ್ಣ ಚಿತ್ರವನ್ನು ಆಚರಿಸುತ್ತದೆ….!!!” ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...