alex Certify ರೋಗಿ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ದಂಗಾದ ವೈದ್ಯರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ದಂಗಾದ ವೈದ್ಯರು….!

40 ವರ್ಷದ ಮಾನಸಿಕ ಅಸ್ವಸ್ಥನ ಹೊಟ್ಟೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು ಈತನ ಹೊಟ್ಟೆಯಿಂದ ಆಘಾತಕಾರಿ ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಪಂಜಾಬ್​ನ ಮೊಗಾದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನು ದೀರ್ಘಕಾಲದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ. ಇದರಿಂದಾಗಿ ಈತನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು.

ವೈದ್ಯರು ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದು ಈತನ ಹೊಟ್ಟೆಯಿಂದ ಇಯರ್​ಫೋನ್​, ಲಾಕೆಟ್​ಗಳು, ಸ್ಕ್ರೂಗಳು ಹಾಗೂ ರಾಖಿಗಳನ್ನು ಹೊರತೆಗೆಯಲಾಗಿದೆ.

ಆತನ ಹೊಟ್ಟೆಯಿಂದ ತೆಗೆದ ವಸ್ತುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಲಾಗಿದ್ದು ಈ ಫೋಟೋ ಸಖತ್​ ವೈರಲ್​ ಆಗಿದೆ. ಮಾನಸಿಕ ಅಸ್ವಸ್ಥನ ಹೊಟ್ಟೆಯಿಂದ ಸೇಫ್ಟಿ ಪಿನ್​ಗಳು, ಶರ್ಟ್ ಬಟನ್​ಗಳು ಹಾಗೂ ಜಿಪ್​ಗಳನ್ನೂ ಹೊರತೆಗೆಯಲಾಗಿದೆ.

ಈ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮೊಗಾ ಮೆಡಿಸಿಟಿ ಆಸ್ಪತ್ರೆಯ ನಿರ್ದೇಶಕರು, ರೋಗಿಯು ಕಳೆದ 2 ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಜ್ವರ ಹಾಗೂ ವಾಂತಿ ತೀವ್ರವಾದ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಹೊಟ್ಟೆಯಲ್ಲಿ ಸ್ಕ್ರೂಗಳು, ನಟ್​ಗಳು ಹಾಗೂ ಬೋಲ್ಟ್​ಗಳು ಇರೋದು ವೈದ್ಯರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ನಿರ್ಧಾರಕ್ಕೆ ನಾವು ಬಂದಿದ್ದೇವು ಎಂದು ಹೇಳಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...