alex Certify ಅಪ್ಪು ಸಾವಿನ ಸುದ್ದಿ ಕೇಳಿ ಮತ್ತೊಬ್ಬ ಅಭಿಮಾನಿ ಸಾವು: ‘ಡಾ. ರಾಜಕುಮಾರ್’ ಹೋಟೆಲ್ ನಡೆಸುತ್ತಿದ್ದ ಅಭಿಮಾನಿ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ಸಾವಿನ ಸುದ್ದಿ ಕೇಳಿ ಮತ್ತೊಬ್ಬ ಅಭಿಮಾನಿ ಸಾವು: ‘ಡಾ. ರಾಜಕುಮಾರ್’ ಹೋಟೆಲ್ ನಡೆಸುತ್ತಿದ್ದ ಅಭಿಮಾನಿ ಇನ್ನಿಲ್ಲ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಬ್ಬರು ಅಭಿಮಾನಿ ಮೃತಪಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆಯ ನೋವು ತಾಳಲಾರದೆ ಮಂಡ್ಯ ತಾಲೂಕಿನ ಕೆರಗೋಡು ರಾಜೇಶ್(50) ಸಾವನ್ನಪ್ಪಿದ್ದಾರೆ.

ಪುನೀತ್ ರಾಜಕುಮಾರ್ ನಿಧನರಾದ ಸುದ್ದಿ ತಿಳಿದ ರಾಜೇಶ್ ಸರಿಯಾಗಿ ಊಟ ಮಾಡಿರಲಿಲ್ಲ. ಪುನೀತ್ ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಅವರು ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ ಸಮೀಪ ಅಸ್ವಸ್ಥರಾಗಿ ಬಿದ್ದಿದ್ದು, ಪರಿಚಯಸ್ಥರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಯವರು ಚಿಕಿತ್ಸೆ ಕೊಡಿಸಿದ್ದರೂ, ಫಲಕಾರಿಯಾಗದೆ ಮಧ್ಯರಾತ್ರಿ ರಾಜೇಶ್ ಮೃತಪಟ್ಟಿದ್ದಾರೆನ್ನಲಾಗಿದೆ.

ರಾಜ್ ಕುಟುಂಬದ ಅಭಿಮಾನಿಯಾಗಿದ್ದ ಅವರು ಡಾ. ರಾಜ್ ಕುಮಾರ್ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದರು. ಪುನೀತ್ ರಾಜಕುಮಾರ್ ನಿಧನದ ಸುದ್ದಿ ತಿಳಿದು ಊಟ ಬಿಟ್ಟು ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಶನಿವಾರ ಮದ್ದೂರು ತಾಲೂಕಿನ ಯಲಾದಹಳ್ಳಿಯಲ್ಲಿ ರಮೇಶ್ ಹೃದಯದಿಂದ ಮೃತಪಟ್ಟಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...