alex Certify SHOCKING NEWS: ನೆಚ್ಚಿನ ನಟನ ಅಗಲಿಕೆಗೆ ಮನನೊಂದ ಅಭಿಮಾನಿ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ನೆಚ್ಚಿನ ನಟನ ಅಗಲಿಕೆಗೆ ಮನನೊಂದ ಅಭಿಮಾನಿ ಆತ್ಮಹತ್ಯೆ

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಅಭಿಮಾನಿಗಳಿಬ್ಬರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಇದೀಗ ಮತ್ತೋರ್ವ ಅಭಿಮಾನಿ ನೆಚ್ಚಿನ ನಟನ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ನಡೆದಿದೆ.

ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ 26 ವರ್ಷದ ರಾಹುಲ್ ಗಾಡಿವಡ್ಡರ ಪುನೀತ್ ಸಾವಿನ ಸುದ್ದಿಕೇಳಿ ಶಾಕ್ ಗೊಳಗಾಗಿದ್ದರು. ತೀವ್ರವಾಗಿ ಮನನೊಂದ ರಾಹುಲ್, ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಬ್ಬದ ಋತುವಿನಲ್ಲಿ ಚಿಂತೆ ಇಲ್ಲದೆ ಶಾಪಿಂಗ್ ಮಾಡಿ, ಆಮೇಲೆ ಹಣ ಪಾವತಿಸಿ

ಪವರ್ ಸ್ಟಾರ್ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದ ಬೆಳಗಾವಿಯ ಅಭಿಮಾನಿ ಪರಶುರಾಮ್ ಹಾಗೂ ಹನೂರಿನ ಮರಿಯಪ್ಪ ಎಂಬ ಇಬ್ಬರು ಅಭಿಮಾನಿಗಳು ಹೃದಯಾಘಾತದಿಂದ ನಿನ್ನೆ ಮೃತಪಟ್ಟಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...