alex Certify ಪುನೀತ್ ಪುಣ್ಯಸ್ಮರಣೆ; ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ; ಅರಮನೆ ಮೈದಾನದಲ್ಲಿ ಸಿದ್ಧವಾಗಿವೆ ತರಹೇವಾರಿ ಊಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುನೀತ್ ಪುಣ್ಯಸ್ಮರಣೆ; ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ; ಅರಮನೆ ಮೈದಾನದಲ್ಲಿ ಸಿದ್ಧವಾಗಿವೆ ತರಹೇವಾರಿ ಊಟ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳಿಗಾಗಿ ಡಾ.ರಾಜ್ ಕುಮಾರ್ ಕುಟುಂಬ ಅನ್ನಸಂತರ್ಪಣೆ ಆಯೋಜಿಸಿದೆ.

ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 12ನೇ ದಿನವಾಗಿದ್ದು, ದೊಡ್ಮನೆಯಿಂದ ಅಭಿಮಾನಿಗಳಿಗಾಗಿ ಅನ್ನಸಂತರ್ಪಣೆ ನಡೆಯುತ್ತಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಕಲ ಸಿದ್ಧತೆ ನಡೆದಿದೆ.

ಬೆಚ್ಚಿಬೀಳಿಸುವಂತಿದೆ ರಜೆಯಲ್ಲಿ ತಿರುಗಲು ಹೊರಟವನ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ…!

ಬೆಳಿಗ್ಗೆ 11 ಗಂಟೆಯಿಂದ ಅನ್ನಸಂತರ್ಪಣೆ ಆರಂಭವಾಗಲಿದ್ದು, ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ. 4 ಸಾವಿರ ಮಾಂಸಾಹಾರಿ ಹಾಗೂ 1 ಸಾವಿರ ಸಸ್ಯಾಹಾರಿ ಕೌಂಟರ್ ಗಳನ್ನು ಸಿದ್ಧಪಡಿಸಲಾಗಿದ್ದು, 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ, ಟೇಬಲ್ ಗಳನ್ನು ಹಾಕಲಾಗಿದೆ.

ಸಸ್ಯಾಹಾರಿಗಳಿಗಾಗಿ ಘೀ ರೈಸ್, ವೆಜ್ ಕುರ್ಮಾ, ಅಕ್ಕಿ ಪಾಯಸ, ಆಲೂ ಕಬಾಬ್, ಗೋಬಿ ಮಂಚೂರಿ, ಮಸಾಲಾ ವಡೆ, ಅನ್ನ-ಸಾಂಬಾರ್, ರಸಂ, ಹಪ್ಪಳದ ಊಟ ಸಿದ್ಧಪಡಿಸಲಾಗಿದ್ದು, ಮಾಂಸಾಹಾರಿಗಳಿಗಾಗಿ ಚಿಕನ್ ಚಾಪ್ಸ್, ಕಬಾಬ್, ಮೊಟ್ಟೆ, ಘೀ ರೈಸ್, ಅನ್ನ, ರಸಂ, ಅಕ್ಕಿ ಪಾಯಸ ಸಿದ್ಧಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...