alex Certify ನನ್ನ ಮಗನನ್ನು ಕಳೆದುಕೊಂಡರೂ ಇಷ್ಟು ನೋವಾಗುತ್ತಿರಲಿಲ್ಲ; ಅಪ್ಪು ನೆನೆದು ಕಣ್ಣೀರಿಡುತ್ತಾ ಕುಸಿದುಬಿದ್ದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಮಗನನ್ನು ಕಳೆದುಕೊಂಡರೂ ಇಷ್ಟು ನೋವಾಗುತ್ತಿರಲಿಲ್ಲ; ಅಪ್ಪು ನೆನೆದು ಕಣ್ಣೀರಿಡುತ್ತಾ ಕುಸಿದುಬಿದ್ದ ಮಹಿಳೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ಅಗಲಿಕೆ ಇಡೀ ಕರುನಾಡಿಗೆ ಆಘಾತತಂದಿದೆ. ನೆಚ್ಚಿನ ನಟನ ನಿಧನದಿಂದ ಶಾಕ್ ಗೊಳಗಾಗಿರುವ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ.

ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ರಾಜಕುಮಾರ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದ ಮಹಿಳಾ ಅಭಿಮಾನಿಯೋರ್ವರು ಪುನೀತ್ ಅಗಲಿಕೆ ನೋವು ತಾಳಲಾರದೇ , ನನ್ನ ಮಗ ಸತ್ತರೂ ನನಗೆ ಇಷ್ಟು ನೋವಾಗುತ್ತಿರಲಿಲ್ಲ. ಅಪ್ಪು ಚಿತ್ರ ನೋಡಲೆಂದು ಚಿತ್ರಮಂದಿರಕ್ಕೆ ಬಂದಿದ್ದೇನೆ. ನನಗೆ ಅಪ್ಪು ಬೇಕು ಎಂದು ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾರೆ.

ಅತ್ತು ಅತ್ತು ಸುಸ್ತಾದ ಮಹಿಳೆ ಆಘಾತದಿಂದ ಕುಸಿದುಬಿದ್ದ ಘಟನೆ ಕೂಡ ನಡೆದಿದೆ. ಯುವರತ್ನನನ್ನು ಕಳೆದುಕೊಂಡಿರುವ ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿದ್ದು, ಅಭಿಮಾನಿಗಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...