alex Certify SHOCKING: ರಾತ್ರಿ ಹೊತ್ತಲ್ಲಿ ಬೆತ್ತಲಾಗಿ ಮಹಿಳಾ ಚಾಲಕಿ ಬೆನ್ನಟ್ಟಿ ಲೈಂಗಿಕ ಕ್ರಿಯೆ ಪೀಡಿಸಿದ ಪ್ರಯಾಣಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ರಾತ್ರಿ ಹೊತ್ತಲ್ಲಿ ಬೆತ್ತಲಾಗಿ ಮಹಿಳಾ ಚಾಲಕಿ ಬೆನ್ನಟ್ಟಿ ಲೈಂಗಿಕ ಕ್ರಿಯೆ ಪೀಡಿಸಿದ ಪ್ರಯಾಣಿಕ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಮಹಿಳಾ ಆಟೋರಿಕ್ಷಾ ಚಾಲಕಿಗೆ ಪ್ರಯಾಣಿಕನೊಬ್ಬ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ.

ಡಿಸೆಂಬರ್ 26 ರ ರಾತ್ರಿ ಕತ್ರಾಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಲೈಂಗಿಕತೆಗೆ ಒತ್ತಾಯಿಸಿ ಬೆತ್ತಲೆಯಾಗಿ ಮಹಿಳಾ ಚಾಲಕಿ ಹಿಂಬಾಲಿಸಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಪುಣೆ ಜಿಲ್ಲೆಯ ಹಡಪ್ಸರ್ ಪ್ರದೇಶದ ನಿವಾಸಿಯಾಗಿರುವ 30 ವರ್ಷದ ನಿಖಿಲ್ ಅಶೋಕ್ ಮೆಮ್ಜಾದೆ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಕಾಟ್ರಾಜ್ ಘಾಟ್‌ ಗೆ ಹೋಗಲು ಮಗರಪಟ್ಟದಿಂದ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದ.

ರಾತ್ರಿ 10 ಗಂಟೆಯ ಸುಮಾರಿಗೆ ಘಟನಾ ಸ್ಥಳಕ್ಕೆ ತಲುಪಿದ ನಂತರ, ಮಹಿಳಾ ಚಾಲಕಿಗೆ ಹೋಟೆಲ್ ಬಳಿ ಆಟೋ ನಿಲ್ಲಿಸಲು ಹೇಳಿದ್ದು, ತನ್ನೊಂದಿಗೆ ಊಟ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಮಹಿಳೆ ರಾತ್ರಿ ಊಟ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಆಕೆಗೆ ಕಪಾಳಮೋಕ್ಷ ಮಾಡಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಮಹಿಳಾ ಚಾಲಕಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿ ಅಲ್ಲಿಂದ ಓಡಿಹೋಗಲು ಆರಂಭಿಸಿದಾಗ ಆರೋಪಿ ತನ್ನ ಬಟ್ಟೆಗಳನ್ನು ತೆಗೆದು ಬೆತ್ತಲೆಯಾಗಿ ಬೆನ್ನಟ್ಟಿದ್ದಾನೆ. ಮಹಿಳೆ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಿದ್ದಾಳೆ. ನಂತರ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿ ಗುರುವಾರ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...