alex Certify ಪೂಮಾ ಬ್ರಾಂಡ್​ ಅಂಬಾಸಿಡರ್​‌ ಆಗಿ ʼಬಿಜ್ಲಿ ಬಿಜ್ಲಿʼ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂಮಾ ಬ್ರಾಂಡ್​ ಅಂಬಾಸಿಡರ್​‌ ಆಗಿ ʼಬಿಜ್ಲಿ ಬಿಜ್ಲಿʼ ಗಾಯಕ

ಜರ್ಮನ್​ ಸ್ಪೋರ್ಟ್ಸ್​ ವೇರ್​ ಬ್ರ್ಯಾಂಡ್​ ಪೂಮಾ ಜನಪ್ರಿಯ ಭಾರತೀಯ ಗಾಯಕ ಹಾರ್ಡಿ ಸಂಧು ಅವರನ್ನು ಬ್ರಾಂಡ್​ ಅಂಬಾಸಿಡರ್​ ಆಗಿ ಘೋಷಿಸಿದೆ.

ಪೂಮಾ ಬ್ರಾಂಡ್​ ಅನ್ನು ಪ್ರಮೋಟ್​ ಮಾಡುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ, ಕೆ.ಎಲ್.​ ರಾಹುಲ್​, ಕರೀನಾ ಕಪೂರ್​, ಯುವರಾಜ್​ ಸಿಂಗ್​, ಎಂಸಿ ಮೇರಿ ಕೋಮ್​, ಅವನಿ ಲೆಖರಾ ಮತ್ತು ದ್ಯುತಿ ಚಂದ್​ ಇದ್ದು, ಇದೀಗ ಸಂಧು ಹೊಸ ಸೇರ್ಪಡೆಯಾಗಿದೆ.

ಮಾಜಿ ಕ್ರಿಕೆಟಿಗ, ನಟ ಮತ್ತು ಪಾಪ್​-ಸ್ಟಾರ್​ನ ಸೇರ್ಪಡೆಯು ಬ್ರ್ಯಾಂಡ್ ನ ಭೌಗೋಳಿಕ ಪ್ರಸ್ತುತತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ತನ್ನ ಮಾರುಕಟ್ಟೆ ನಾಯಕತ್ವದ ಸ್ಥಾನವನ್ನು ಕಾಪಾಡಿಕೊಳ್ಳಲು ಈ ಒಡಂಬಡಿಕೆ ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅವರು ಬ್ರ್ಯಾಂಡ್ ಪಾದರಕ್ಷೆಗಳು, ಉಡುಪುಗಳು ಮತ್ತು ಆಯ್ದ ಸಂಗ್ರಹಗಳನ್ನು ಒಳಗೊಂಡಂತೆ ಪರಿಕರಗಳನ್ನು ಪ್ರಮೋಟ್​ ಮಾಡಲಿದ್ದಾರೆ.‌

ಬಿಜ್ಲಿ ಬಿಜ್ಲಿ, ಕ್ಯಾ ಬಾತ್​ ಆಯೇ ಮುಂತಾದ ಹಾಡುಗಳ ಮೂಲಕ ಸಂಧು ಖ್ಯಾತಿಯಾಗಿದ್ದಾರೆ. ಸಂಧು 2004ರಲ್ಲಿ ವೇಗದ ಬೌಲರ್​ ಆಗಿ ಭಾರತದ ಯು19 ಕ್ರಿಕೆಟ್​ ವಿಶ್ವಕಪ್​ ತಂಡದಲ್ಲಿ ಸದಸ್ಯರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...