alex Certify ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿದ ಹುಚ್ಚು ನಾಯಿ ಬಡಿದು ಕೊಂದ ಸಾರ್ವಜನಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿದ ಹುಚ್ಚು ನಾಯಿ ಬಡಿದು ಕೊಂದ ಸಾರ್ವಜನಿಕರು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನಲ್ಲಿ ಸಿಕ್ಕ ಸಿಕ್ಕ ಜನರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ.

ಪರಮೇಶ್ವರ, ಚೌಡಪ್ಪ, ಕೃಷ್ಣ, ಚೌಡರೆಡ್ಡಿ, ಮೊಹಮ್ಮದ್, ಕಿಶೋರ್, ಅನ್ವರ್, ರಾಧಾ, ತನ್ವೀರ್ ಸೇರಿದಂತೆ 12 ಜನರಿಗೆ ಗಾಯಗಳಾಗಿವೆ. ನಾಯಿ ಕಡಿತದಿಂದ ಗಾಯಗೊಂಡವರಿಗೆ ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ನೆಲಮಂಗಲ ಟೌನ್ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಶಶಿಧರ್ ನೇತೃತ್ವದಲ್ಲಿ ನಾಯಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನೆಲಮಂಗಲ ಟಿಬಿ ಬಸ್ ನಿಲ್ದಾಣದ ಬಳಿ ಹುಚ್ಚು ನಾಯಿ ಪತ್ತೆಯಾಗಿದ್ದು, ಹುಚ್ಚು ನಾಯಿ ಕಂಡು ಬಂದ ತಕ್ಷಣ ಸಾರ್ವಜನಿಕರು ಹೊಡೆದು ಕೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...