alex Certify ಗೇಮ್‌ ಪ್ರಿಯರಿಗೆ ಖುಷಿ ಸುದ್ದಿ: ಬ್ಯಾಟಲ್‌ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಗೆ ದಿನಾಂಕ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಮ್‌ ಪ್ರಿಯರಿಗೆ ಖುಷಿ ಸುದ್ದಿ: ಬ್ಯಾಟಲ್‌ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಗೆ ದಿನಾಂಕ ಫಿಕ್ಸ್

Battlegrounds Mobile India: यूजर्स को नहीं करना होगा अब ज्यादा इंतजार, जान लें लॉन्चिंग की डेट!

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಗಾಗಿ ಕಾಯ್ತಿದ್ದ ಜನರಿಗೆ ಖುಷಿ ಸುದ್ದಿಯೊಂದಿದೆ. ಪೂರ್ವ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಪೂರ್ವ ನೋಂದಣಿ ಮೇ 18 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ವಿಡಿಯೊ ಮೂಲಕ ತಿಳಿಸಿತ್ತು. ಈಗ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಜೂನ್ 18 ರಂದು ಬಿಡುಗಡೆಯಾಗಲಿದೆ. ಭಾರತದಲ್ಲಿ ಪಬ್ಜಿ ಗೇಮ್ ನಿಷೇಧಿಸಿದ ನಂತರ ಗೇಮಿಂಗ್ ಪ್ರಿಯರು ಪರ್ಯಾಯ ಆಟದ ಹುಡುಕಾಟದಲ್ಲಿದ್ದರು. ಈಗ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಪಬ್ಜಿ ಜಾಗವನ್ನು ತುಂಬಲಿದೆ.

ಟಿಪ್ಸ್ಟರ್ ಮ್ಯಾಕ್ಸ್ಟರ್ನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೋಡ್ ಹಂಚಿಕೊಂಡಿದ್ದಾರೆ. 18062021 ಕೋಡ್ ನೋಡಿ ಸ್ಪಷ್ಟವಾಗಿ ದಿನಾಂಕ ಹೇಳಬಹುದಾಗಿದೆ. ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಜೂನ್ 18,2021ರಂದು ಬಿಡುಗಡೆಯಾಗಲಿದೆ. ಗೇಮ್ ಪ್ರಿಯರಿಗೆ ಇನ್ಮುಂದೆ ಇದಕ್ಕಾಗಿ ಹೆಚ್ಚಿನ ಸಮಯ ಕಾಯ್ಬೇಕಾಗಿಲ್ಲ. ಹೊಸ ಆವೃತ್ತಿಯಲ್ಲಿ ಕೆಲ ನಿರ್ಬಂಧ ವಿಧಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಟವಾಡಲು ಪಾಲಕರ ಅನುಮತಿ ಪಡೆಯಬೇಕಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...