alex Certify PUBG ಆಡಲು ವಿರೋಧಿಸಿದ್ದಕ್ಕೆ ತಾಯಿಯನ್ನೇ ಗುಂಡಿಟ್ಟು ಕೊಂದ ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ಆಡಲು ವಿರೋಧಿಸಿದ್ದಕ್ಕೆ ತಾಯಿಯನ್ನೇ ಗುಂಡಿಟ್ಟು ಕೊಂದ ಮಗ

ಪಬ್‌ ಜೀ ವ್ಯಸನಿಯಾಗಿದ್ದ ಅಪ್ರಾಪ್ತನೊಬ್ಬ ಆಡಲು ತಾಯಿ ವಿರೋಧಿಸಿದಳೆಂಬ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದಿದೆ.

16 ವರ್ಷದ ಈ ಬಾಲಕ ಸದಾ ಕಾಲ ಪಬ್‌ ಜೀ ಗೇಮ್‌ ಆಡುವುದರಲ್ಲೇ ನಿರತನಾಗಿರುತ್ತಿದ್ದ ಎನ್ನಲಾಗಿದೆ. ಹೀಗಾಗಿ ಆಕೆಯ ತಾಯಿ ಇದಕ್ಕೆ ನಿಯಂತ್ರಣ ಹೇರಲು ಮುಂದಾಗಿದ್ದು, ಆಕ್ರೋಶಗೊಂಡ ಬಾಲಕ ತನ್ನ ತಂದೆಯ ಪಿಸ್ತೂಲಿನಿಂದ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಬಳಿಕ ತಾಯಿ ಸಾವಿನ ಕುರಿತು ಪೊಲೀಸರ ಮುಂದೆ ಸುಳ್ಳು ಕಥೆ ಕಟ್ಟಿದ್ದು, ಆದರೆ ಪೊಲೀಸರ ಕೂಲಂಕುಶ ತನಿಖೆಯಿಂದ ಮಗನೇ ತಾಯಿಯನ್ನು ಕೊಲೆ ಮಾಡಿರುವ ಸಂಗತಿ ಬಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...