alex Certify BIG NEWS: ಇನ್ಸ್ ಪೆಕ್ಟರ್ ಗೆ ಆವಾಜ್ ಹಾಕಿದ ಘಟನೆ; PSI ಅಭ್ಯರ್ಥಿ ವಿರುದ್ಧ FIR ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ಸ್ ಪೆಕ್ಟರ್ ಗೆ ಆವಾಜ್ ಹಾಕಿದ ಘಟನೆ; PSI ಅಭ್ಯರ್ಥಿ ವಿರುದ್ಧ FIR ದಾಖಲು

ಬೆಂಗಳೂರು: ಜಗಳ ಬಿಡಿಸಲು ಬಂದ ಇನ್ಸ್ ಪೆಕ್ಟರ್ ಗೆ ಆವಾಜ್ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಪಿಎಸ್ ಐ ಅಭ್ಯರ್ಥಿ ಓರ್ವನ ವಿರುದ್ಧ ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ತಾನು ಪ್ರೀತಿಸಿದ ಮಹಿಳೆ ಬೇರೆಯವರೊಂದಿಗೆ ಸ್ನೇಹ ಬೆಳೆಸಿದ್ದಾಳೆ ಎಂದು ಮಹಿಳೆಯ ಮನೆ ಮುಂದೆ ಪಿಎಸ್ ಐ ಅಭ್ಯರ್ಥಿ ಜಗದೀಶ್ ಎಂಬಾತ ಗಲಾಟೆ ಮಾಡುತ್ತಿದ್ದ. ಆತನನ್ನು ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಲು ಬಂದ ಇನ್ಸ್ ಪೆಕ್ಟರ್ ಸಂದೀಪ್ ಅವರಿಗೆ ಬೆದರಿಕೆ ಹಾಕಿದ್ದಾನೆ.

ಹುಡುಗರನ್ನು ಕರೆ ತಂದು ಘೇರಾವ್ ಹಾಕಿಸ್ತೀನಿ. ಬಟ್ಟೆ ಬಿಚ್ಚಿಸ್ತೀನಿ ಎಂದು ಆವಾಜ್ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಪಿ ಎಸ್ ಐ ಅಭ್ಯರ್ಥಿ ಜಗದೀಶ್ ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಇಷ್ಟಕ್ಕೂ ಜಗದೀಶ್ ಪಿಎಸ್ ಐ ಪರೀಕ್ಷೆಯಲ್ಲಿ ಒಮ್ಮೆ ಫೇಲ್ ಆಗಿದ್ದ ಎನ್ನಲಾಗಿದೆ. ಅಲ್ಲದೇ ಜಗದೀಶ್ ಗೆ ಈಗಾಗಲೇ ಮದುವೆಯಾಗಿದ್ದರೂ ಮತ್ತೋರ್ವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಬೇರೊಬ್ಬರಿಗೆ ಮೆಸೇಜ್ ಮಡಿದ್ದಾಳೆ ಎಂದು ಆಕೆಯ ಮನೆ ಮುಂದೆ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಹೊಯ್ಸಳ ಪೊಲೀಸರು ಆತನನ್ನು ಕರೆದೊಯ್ಯಲು ಬಂದಾಗ ಎ ಎಸ್ ಐ ಮೇಲೆಯೂ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...