alex Certify ವಿದ್ಯಾರ್ಥಿಗಳಿಗೆ ಸೂಪರ್ ಸುದ್ದಿ : 35 ಸಾವಿರದವರೆಗೆ ‘PRIZE MONEY’ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಸೂಪರ್ ಸುದ್ದಿ : 35 ಸಾವಿರದವರೆಗೆ ‘PRIZE MONEY’ ಪಡೆಯಿರಿ

ಶಿವಮೊಗ್ಗ :  2023-24 ಸಾಲಿಗೆ ಸಾಗರ ಸಮಾಜ ಕಲ್ಯಾಣ ಇಲಾಖೆಯು ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಪಿ.ಯು.ಸಿ ಮತ್ತು 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸ್‍ಗಳಿಗೆ ರೂ.20,000/-, ಪದವಿ ರೂ.25,000/- , ಸ್ನಾತಕೋತ್ತರ ಪದವಿ ಪದವಿ ರೂ.30,000/- ಹಾಗೂ ಕೃಷಿ/ ಇಂಜಿನಿಯರಿಂಗ್/ ವೈದ್ಯಕೀಯ/ ಪಶುವೈದ್ಯಕೀಯ ರೂ.35,000/- ಗಳನ್ನು ಪಡೆಯಲು ಸಮಾಜ ಕಲ್ಯಾಣ ಇಲಾಖೆ ವೆಬ್‍ಸೈಟ್ www.tw.kar.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಯನ್ನು ಕಚೇರಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08183-229402/9480843192 ಗಳನ್ನು ಸಂಪರ್ಕಿಸುವಂತೆ ಸಾಗರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ :  2023-24 ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರವರ್ಗ-1, ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿನಿಲಯಗಳಲ್ಲಿ ಮೆಟ್ರಿಕ್ ನಂತರದ ಹಾಗೂ ಹೊಸದಾಗಿ ಪ್ರವೇಶ ಬಯಸುವ ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಸಕ್ತ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ತಂತ್ರಾಂಶ http://shp.karnataka.gov.xn--in-rwhia2fue/ ಜು.15 ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ : 08183-222129/ 8050770005 ಅಥವಾ https://bcwd.karnataka.gov.in, email- bcwd.hostels@gmail.com ಗಳನ್ನು ಸಂಪರ್ಕಿಸುವುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...