alex Certify ವಿಚ್ಛೇದನದ ಸುದ್ದಿ ಮಧ್ಯೆ ಮಗುವಿನ ಬಗ್ಗೆ ಮಾತನಾಡಿದ ಪಿಗ್ಗಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನದ ಸುದ್ದಿ ಮಧ್ಯೆ ಮಗುವಿನ ಬಗ್ಗೆ ಮಾತನಾಡಿದ ಪಿಗ್ಗಿ…!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ, ಪತಿ ಜೋನಾಸ್ ಹೆಸರನ್ನು ತೆಗೆದು ಹಾಕಿದ್ದಾರೆ. ಹೆಸರು ತೆಗೆಯುತ್ತಿದ್ದಂತೆ ವಿಚ್ಛೇದನದ ಬಗ್ಗೆ ನಿರಂತರ ಚರ್ಚೆಯಾಗ್ತಿದೆ. ಸಾಮಾನ್ಯವಾಗಿ ಎಲ್ಲ ವಿಚ್ಛೇದನ ಪಡೆದ ನಟಿಯರು ಮೊದಲು ಪತಿ ಹೆಸರನ್ನು ತೆಗೆಯೋದು ಕಾಮನ್. ಇದೇ ಕಾರಣಕ್ಕೆ ಪ್ರಿಯಾಂಕಾ ವಿಚ್ಛೇದನದ ಸುದ್ದಿ ಚರ್ಚೆಯಾಗ್ತಿದೆ.

ಪ್ರಿಯಾಂಕಾ ವಿಚ್ಛೇದನದ ಬಗ್ಗೆ ತಾಯಿ ಮಧು ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಇದು ವದಂತಿ ಎಂದು ಅವರು ಹೇಳಿದ್ದಾರೆ. ಆದ್ರೆ ಪ್ರಿಯಾಂಕಾರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ಪ್ರಿಯಾಂಕಾ, ಮಗುವಿನ ಬಗ್ಗೆ ಮಾತನಾಡಿ, ಮತ್ತೆ ಚರ್ಚೆಗೆ ಬಂದಿದ್ದಾರೆ.

ಶೋ ಒಂದರಲ್ಲಿ ಮಾತನಾಡಿದ ಪ್ರಿಯಾಂಕಾ, ನಿಕ್ ಸಹೋದರರ ಉದಾಹರಣೆಯನ್ನು ನೀಡಿ, ಇನ್ನೂ ಮಕ್ಕಳಾಗದ ದಂಪತಿ ನಾವು ಮಾತ್ರ. ಈ ಕಾರಣದಿಂದ ನಾನು ಇಂದು ಈ ಬಗ್ಗೆ ಘೋಷಿಸಲು ತುಂಬಾ ಉತ್ಸುಕಳಾಗಿದ್ದೇನೆ. ಕ್ಷಮಿಸು ನಿಕ್, ನಾನು ಇದನ್ನು ಹೇಳಬೇಕಾಗಿದೆ. ನಿಕ್ ಮತ್ತು ನಾನು ಪ್ಲಾನ್ ಮಾಡುತ್ತಿದ್ದೇವೆ. ಟು ನೈಟ್ ನಾವು… ಅತಿಯಾಗಿ ಕುಡಿಯುತ್ತೇವೆ ಮತ್ತು ನಾಳೆ ಬೆಳಿಗ್ಗೆ ಮಲಗುತ್ತೇವೆ ಎಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ, ಮಗುವಿನ ಬಗ್ಗೆ ಇನ್ನೂ ಗಂಭೀರವಾಗಿಲ್ಲ. ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಮದುವೆಯಾದ ನಂತ್ರ  ಅಭಿಮಾನಿಗಳು ಮಗುವಿನ ಬಗ್ಗೆ ಕೇಳ್ತಿದ್ದಾರೆ. ಆದ್ರೆ ಈ ಬಗ್ಗೆ ಪ್ರಿಯಾಂಕಾ ಜೋಡಿ ಇನ್ನೂ ಗಂಭೀರ ನಿರ್ಧಾರ ತೆಗೆದುಕೊಂಡಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...