alex Certify ರಕ್ತಸಿಕ್ತವಾಗಿದ್ದ ಪ್ರಿಯಾಂಕಾ ಫೋಟೋ ನೋಡಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ನೆಮ್ಮದಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತಸಿಕ್ತವಾಗಿದ್ದ ಪ್ರಿಯಾಂಕಾ ಫೋಟೋ ನೋಡಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ನೆಮ್ಮದಿ ಸುದ್ದಿ

ಬಾಲಿವುಡ್‍ನಿಂದ ಹಾಲಿವುಡ್‍ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ, ಇತ್ತೀಚೆಗೆ ತಮ್ಮ ಹಣೆಗೆ ರಕ್ತ ಮೆತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಕ್ಷಣಕಾಲ ಗಾಬರಿಗೊಂಡಿದ್ದಾರೆ.

ಏನಾಯಿತು, ಅಪಘಾತವೇ ಎಂದು ವಿಚಾರಿಸಲು ಆರಂಭಿಸಿದ್ದಾರೆ. ಆದರೆ, ಕೆಲ ಕಾಲದ ಬಳಿಕ ಅಭಿಮಾನಿಗಳಿಗೆ ಈ ರಕ್ತದ ಕಲೆಯು ಅಸಲಿಯೋ ಅಥವಾ ನಕಲಿಯೋ ಎಂದು ಶಂಕೆ ಶುರುವಾಗಿದೆ.

‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಆಶಿಕಾ ರಂಗನಾಥ್

ಆಗ ಫೋಟೊದ ಅಡಿಬರಹವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅದರಲ್ಲಿ ಕಂಡುಬಂದಿದೆ ಸತ್ಯಾಂಶ ! ಹೌದು, ಲಂಡನ್‍ನಲ್ಲಿ ಸಿಟಾಡೆಲ್ ಹೆಸರಿನ ಸಾಹಸಮಯ ವೆಬ್‍ಸಿರೀಸ್ ಶೂಟಿಂಗ್‍ನಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ.

ಅವೆಂಜರ್ಸ್ ಖ್ಯಾತಿಯ ರುಸ್ಸೊ ಬ್ರದರ್ಸ್ ಈ ವೆಬ್‍ಸಿರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಶಾಂತರಾಗಿ, ರಕ್ತದ ಕಲೆಯು ಶೂಟಿಂಗ್‍ಗಾಗಿ ಬಳಿದುಕೊಂಡಿರುವ ಮೇಕಪ್ ಎಂದು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

1

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...