alex Certify ಭಾವನಾತ್ಮಕ ನೋಟ್ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಣ್ಸನ್ನೆ ಬೆಡಗಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವನಾತ್ಮಕ ನೋಟ್ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಣ್ಸನ್ನೆ ಬೆಡಗಿ…!

ದಕ್ಷಿಣ ಭಾರತದ ಚಿತ್ರರಂಗದ ಟೀನೇಜ್ ಸೆನ್ಸೇಷನ್ ಪ್ರಿಯಾ ಪ್ರಕಾಶ್ ವಾರಿಯರ್‌ ತಮ್ಮ ಹೊಸ ವರ್ಷವನ್ನು ಭಾವನಾತ್ಮಕ ನೋಟ್ ಒಂದರ ಮೂಲಕ ಆರಂಭಿಸಿದ್ದಾರೆ.

“ಡಿಯರ್‌ 2021, ನೀನು ಸುಲಭದ ವರ್ಷವಾಗಿರಲಿಲ್ಲ. ನಿನ್ನನ್ನು ದಾಟಿ ಹೋಗಲು ಬಹಳ ಹೋರಾಟವನ್ನೇ ಮಾಡಬೇಕಾಯಿತು. ಪಂಥ, ನಂಬಿಕೆ ಮತ್ತು ಮಾನವೀಯ ಸಂಬಂಧಗಳನ್ನೇ ಪ್ರಶ್ನಿಸಿ ನೋಡಬೇಕಾಯಿತು. ನೀನು ನನ್ನ ಮೇಲೆ ಕೊಂಚ ಕಠಿಣವಾದ ಕಾರಣ ನನಗೆ ಸ್ವಲ್ಪ ಬೇಸರವೇ ಆಗಿದೆ. ಆದರೆ ನಾನು ನನ್ನ ನಿರೀಕ್ಷೆಗಳ ಮೇಲೆ ಬಯ್ಯೋವಷ್ಟು ನಿನ್ನನ್ನು ಬಯ್ಯೋದಿಲ್ಲ,” ಎಂದಿದ್ದಾರೆ ಪ್ರಿಯಾ.

“ನೀನು ನನ್ನ ಜೀವನವನ್ನೇ ಪವಾಡಸದೃಶವಾಗಿ ಮೇಲುಕೆಳಗೆ ಮಾಡುವೆ ಎಂದು ಆಲೋಚಿಸಲು ನನಗೆ ಹುಚ್ಚು ಹಿಡಿದಿತ್ತೇನೋ, ನಿನ್ನಿಂದ ನನಗೆ ಬೇಕಾದ ಹಾಗಂತೂ ಅಲ್ಲ. ಈ ಎಲ್ಲದರ ನಡುವೆ ಬೆಳ್ಳಿಗೆರೆಗಳನ್ನು ಕಾಣುವುದು ಬಹಳ ಕಠಿಣ ಆದರೂ ನಾನು ನಿಂತಿದ್ದೇನೆ. ಹೊಸ ವರ್ಷಕ್ಕೆ ನೀನು ನನ್ನ ಮುಂಬರುವ ಸವಾಲುಗಳಿಗೆ ಸಜ್ಜಗೊಳಿಸಿದ್ದೀಯೆ ಎಂದು ನಾನು ನಂಬಿದ್ದೇನೆ. ನನ್ನೊಂದಿಗೆ ನಿಂತ ಪ್ರತಿಯೊಬ್ಬರಿಗೂ ನಾನು ಆಭಾರಿ,” ಎಂದು ನೋಟ್ ಒಂದನ್ನು ಪ್ರಿಯಾ ಪ್ರಕಾಶ್ ವಾರಿಯರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...