alex Certify ʼಆಂಡ್ರಾಯ್ಡ್ʼ​ ಬಳಕೆದಾರರೇ ಎಚ್ಚರ..! ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿವೆ ಈ ಅಪ್ಲಿಕೇಶನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಂಡ್ರಾಯ್ಡ್ʼ​ ಬಳಕೆದಾರರೇ ಎಚ್ಚರ..! ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿವೆ ಈ ಅಪ್ಲಿಕೇಶನ್ಸ್

ಗೂಗಲ್​ ಪ್ಲೇಸ್ಟೋರ್​ ನಲ್ಲಿ ಲಭ್ಯವಿರುವ ಅನೇಕ ಜನಪ್ರಿಯ ಅಪ್ಲಿಕೇಶನ್​ಗಳು ಮಿಲಿಯನ್​ಗಟ್ಟಲೇ ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡಿವೆ. ಭದ್ರತಾ ಸಂಶೋಧಕರು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಬರೋಬ್ಬರಿ 140 ಮಿಲಿಯನ್​ ಬಾರಿ ಡೌನ್​ಲೋಡ್​ ಮಾಡಲಾದ ಡಜನ್​ಗಟ್ಟಲೇ ಆಂಡ್ರಾಯ್ಡ್​ ಅಪ್ಲಿಕೇಶನ್​ಗಳನ್ನು ಪತ್ತೆ ಮಾಡಿದ್ದು, ಈ ಅಪ್ಲಿಕೇಶನ್​ಗಳು ಗ್ರಾಹಕರ ಮಾಹಿತಿ ಸೋರಿಕೆ ಮಾಡಿವೆ ಎಂದು ಹೇಳಿತ್ತು. ಇದೀಗ ಹೊಸ ಸಮೀಕ್ಷೆಯಲ್ಲಿ ಇಂತಹ ಮತ್ತೆ 14 ಅಪ್ಲಿಕೇಶನ್​ಗಳು ಪತ್ತೆಯಾಗಿವೆ. ಈ ಅಪ್ಲಿಕೇಶನ್​ಗಳನ್ನು 14.25 ಬಾರಿ ಡೌನ್​ಲೋಡ್​ ಮಾಡಲಾಗಿದೆ.‌

ಈ ಆಂಡ್ರಾಯ್ಡ್​ ಅಪ್ಲಿಕೇಶನ್​ಗಳು ಗ್ರಾಹಕರ ಅತ್ಯಂತ ಖಾಸಗಿ ಮಾಹಿತಿಗಳು ಅಂದರೆ ಇಮೇಲ್​, ಬಳಕೆದಾರರ ಹೆಸರು, ಬ್ಯಾಂಕಿಂಗ್​ ಮಾಹಿತಿ ಹೀಗೆ ಸಾಕಷ್ಟು ವಿಚಾರಗಳನ್ನು ಲೀಕ್​ ಮಾಡ್ತಿವೆ.

ಸೈಬರ್​ ನ್ಯೂಸ್​ ನೀಡಿರುವ ಮಾಹಿತಿಯ ಪ್ರಕಾರ, ಈ ಜನಪ್ರಿಯ 14 ಅಪ್ಲಿಕೇಶನ್​ಗಳು ಗ್ರಾಹಕರ ಮಾಹಿತಿಯನ್ನು ಸೋರಿಕೆ ಮಾಡುವುದರ ಜೊತೆಗೆ ಬಳಕೆದಾರರ ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡುತ್ತಿವೆ. ಇವುಗಳಲ್ಲಿ ಯುನಿವರ್ಸಲ್​ ಟಿವಿ ರಿಮೋಟ್​​ ಕಂಟ್ರೋಲ್​ ಕೂಡ ಇದ್ದು ಈ ಅಪ್ಲಿಕೇಶನ್​​ 100 ಮಿಲಿಯನ್​​​ ಆಂಡ್ರಾಯ್ಡ್​ ಬಳಕೆದಾರರ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಆಗಿದೆ.

ಇನ್ನೊಂದು ಪ್ರಚಲಿತ ಅಪ್ಲಿಕೇಶನ್​ ಅಂದರೆ ಫೈಂಡ್​ ಮೈ ಕಿಡ್ಸ್​ : ಇದು ಮಗುವಿಗೆ ಜಿಪಿಎಸ್​ ವಾಚ್​ ಅಳವಡಿಸಿ ಮೊಬೈಲ್​ನಲ್ಲಿ ಟ್ರ್ಯಾಕರ್​ನ್ನು ಇಡಲಾಗುತ್ತದೆ. ಇದನ್ನು ಕೂಡ ಗೂಗಲ್​ ಪ್ಲೇ ಸ್ಟೋರ್​ ಮೂಲಕ 10 ಮಿಲಿಯನ್​ ಬಾರಿ ಡೌನ್​ ಲೋಡ್​ ಮಾಡಲಾಗಿದೆ.

ಹೈಬ್ರಿಡ್ ವಾರಿಯರ್: ಡಂಜನ್ ಆಫ್ ದಿ ಓವರ್‌ಲಾರ್ಡ್ ಮತ್ತು ರಿಮೋಟ್ ಫಾರ್ ರೋಕು: ಕೋಡ್‌ಮ್ಯಾಟಿಕ್ಸ್ – ಸೈಬರ್ ನ್ಯೂಸ್ ವರದಿ ಮಾಡಿದ ಇತರ ಅಪ್ಲಿಕೇಶನ್‌ಗಳಾಗಿವೆ. ಈ ಎರಡೂ ಅಪ್ಲಿಕೇಶನ್​ಗಳನ್ನು ಎರಡು ಮಿಲಿಯನ್​​ ಬಾರಿ ಡೌನ್​ಲೋಡ್​ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...