alex Certify 50 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದೆ ಕಸಾಯಿಖಾನೆಯಲ್ಲಿದ್ದ ಹಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದೆ ಕಸಾಯಿಖಾನೆಯಲ್ಲಿದ್ದ ಹಂದಿ….!

ಹಂದಿಯಂತೆ ಮೈ ಬೆಳೆಸಿದ್ದೀಯಾ, ಏನಕ್ಕೂ ಪ್ರಯೋಜನವಿಲ್ಲವೆಂದು ಸಾಮಾನ್ಯವಾಗಿ ಎಲ್ಲರೂ ಬೈತಾರೆ. ಆದ್ರೆ ಪಿಗ್ಕಾಸೊ ಹಂದಿ ಎಲ್ಲರ ಗಮನ ಸೆಳೆದಿದೆ. ಹಂದಿ ಬಿಡಿಸಿದ ಚಿತ್ರವೊಂದು 2.36 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಹಂದಿ, ಬ್ರಿಟನ್ ರಾಜಕುಮಾರ ಹ್ಯಾರಿಯ ಚಿತ್ರ ಬಿಡಿಸಿತ್ತು. ಅದನ್ನು ಸ್ಪೇನ್‌ನ ವ್ಯಕ್ತಿಯೊಬ್ಬರು 2.36 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.

ಪಿಗ್ಕಾಸೊ ವಯಸ್ಸು 4 ವರ್ಷ. ಪಿಗ್ಕಾಸೊ ಈವರೆಗೆ ಸಾವಿರಾರು ಚಿತ್ರಗಳನ್ನು ಬಿಡಿಸಿದೆ. ಇದ್ರ ಮಾಲಿಕಳ ಹೆಸರು ಜೊವಾನ್ನೆ ಲೆಫ್ಸನ್. ಪಿಗ್ಕಾಸೊ ದಕ್ಷಿಣ ಆಫ್ರಿಕಾದ ನಿವಾಸಿ. ಹಂದಿ ಗಳಿಕೆಯನ್ನು ಜೊವಾನ್ನೆ, ಫಾರ್ಮ್ ನಲ್ಲಿರುವ ಉಳಿದ ಪ್ರಾಣಿಗಳಿಗೆ ಖರ್ಚು ಮಾಡ್ತಾಳೆ.

2 ಲಕ್ಷ ರೂಪಾಯಿಗೆ ಮಾರಾಟವಾದ ಚಿತ್ರವನ್ನು ಪಿಗ್ಕಾಸೊ ಕೆಲವೇ ನಿಮಿಷದಲ್ಲಿ ತಯಾರಿಸಿತ್ತು. ಸ್ಪೇನ್ ನಲ್ಲಿರುವ ಪಿಗ್ಕಾಸೊ ಅಭಿಮಾನಿ ಇದನ್ನು ಖರೀದಿ ಮಾಡಿದ್ದಾರೆಂದು ಜೊವಾನ್ನೆ ಹೇಳಿದ್ದಾರೆ. ಇದಕ್ಕೂ ಮೊದಲು ಪಿಗ್ಕಾಸೊ, ಬ್ರಿಟನ್ ರಾಣಿಯ ಚಿತ್ರ ಬಿಡಿಸಿತ್ತು. ಅದು 2 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಈ ಹಂದಿಯನ್ನು ಕಸಾಯಿ ಖಾನೆಯಿಂದ ತರಲಾಗಿತ್ತು. ಈ ಹಂದಿ ಈವರೆಗೆ 50 ಲಕ್ಷಕ್ಕಿಂತಲೂ ಹೆಚ್ಚು ಸಂಪಾದನೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...