alex Certify ಡೆನ್ಮಾರ್ಕ್ ನಲ್ಲಿ ಡೋಲು ಬಾರಿಸಿದ ಪ್ರಧಾನಿ; ನರೇಂದ್ರ ಮೋದಿಯವರ ಈ ವಿಡಿಯೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆನ್ಮಾರ್ಕ್ ನಲ್ಲಿ ಡೋಲು ಬಾರಿಸಿದ ಪ್ರಧಾನಿ; ನರೇಂದ್ರ ಮೋದಿಯವರ ಈ ವಿಡಿಯೋ ಫುಲ್‌ ವೈರಲ್

ಡೆನ್ಮಾರ್ಕ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೋಪೆನ್ ಹೇಗನ್ ನಲ್ಲಿರುವ ಭಾರತೀಯ ಮತ್ತು ಡ್ಯಾನಿಶ್ ಸಮುದಾಯಗಳೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಂಗಳವಾರ ಅಲ್ಲಿ ಭಾರತೀಯ ಸಂಸ್ಕೃತಿಗಳಲ್ಲಿ ಒಂದಾಗಿರುವ ಡೋಲು ಬಾರಿಸುವುದರಲ್ಲಿ ಭಾರತೀಯ ಕಲಾವಿದರು ಮಗ್ನರಾಗಿದ್ದರು.

ಇದನ್ನು ಗಮನಿಸಿದ ಪ್ರಧಾನಿ ಮೋದಿ ತಾವು ಏಕೆ ಒಂದು ಪ್ರಯತ್ನ ಮಾಡಬಾರದು ಎಂದು ಭಾವಿಸಿದವರೇ ನೇರವಾಗಿ ಕಲಾವಿದರ ಬಳಿಗೆ ಹೋಗಿ ಡೋಲನ್ನು ಪಡೆದು ಬಾರಿಸಲು ಆರಂಭಿಸಿದರು.

ʼದಿ ಕಾಶ್ಮೀರ್ ಫೈಲ್ಸ್ʼ ಕಾಲ್ಪನಿಕ ಎಂದು ನಮೂದು; ವಿಕಿಪೀಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಆಕ್ರೋಶ

ಅವರ ಈ ತಾಳಕ್ಕೆ ಭಾರತೀಯ ಕಲಾವಿದರು ಹೆಜ್ಜೆ ಹಾಕುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಭಾರತೀಯ ಮತ್ತು ಡ್ಯಾನಿಶ್ ಪ್ರಜೆಗಳು, ಅಧಿಕಾರಿಗಳು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಭಾರತೀಯ ಮೂಲದ ಸಮುದಾಯಗಳೊಂದಿಗೆ ಚರ್ಚೆ ನಡೆಸಿದರು ಮತ್ತು ಭಾರತೀಯ ವೈವಿಧ್ಯಮಯ ಸಂಸ್ಕೃತಿಯನ್ನು ಮತ್ತಷ್ಟು ಶಕ್ತಿಯುತಗೊಳಿಸುವಂತೆ ಕರೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...