alex Certify 73ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ನಿಮಗೆ ಗೊತ್ತಿಲ್ಲದ ಸಂಗತಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

73ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ನಿಮಗೆ ಗೊತ್ತಿಲ್ಲದ ಸಂಗತಿ……!

ಪ್ರಧಾನಿ ನರೇಂದ್ರ ಮೋದಿ ಅವರಿಗೆ 73ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೋದಿ ಅವರ ಕುರಿತಾದ ಕೆಲವು ಆಸಕ್ತಿಕರ ಹಾಗೂ ರೋಚಕ ಸಂಗತಿಗಳನ್ನು ತಿಳಿಯೋಣ. ಮೋದಿ 1950ರ ಸಪ್ಟೆಂಬರ್‌ 17ರಂದು ಗುಜರಾತ್‌ನ ವಡ್ನಗರದಲ್ಲಿ ಜನಿಸಿದರು. ಬಡತನದಲ್ಲೇ ಹುಟ್ಟಿಬೆಳೆದ ಮೋದಿ, ಜಾಗತಿಕ ವೇದಿಕೆಯಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವುದು ನಿಜಕ್ಕೂ ರೋಚಕ. ಪಿಎಂ ಮೋದಿಯವರ ಸಾರ್ವಜನಿಕ ಜೀವನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಪ್ರಾರಂಭವಾಯಿತು. ಕ್ರಮೇಣ ಅವರು ಭಾರತೀಯ ಜನತಾ ಪಕ್ಷದ ವರ್ಚಸ್ವಿ ನಾಯಕರಾಗಿ ಹೊರಹೊಮ್ಮಿದರು.

ಪ್ರಧಾನಿಯಾಗುವ ಮೊದಲು 2001 ಮತ್ತು 2014 ನಡುವೆ 12 ವರ್ಷಗಳಿಗೂ ಹೆಚ್ಚು ಕಾಲ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪಿಎಂ ಮೋದಿಯವರ ರಾಜಕೀಯದ ಬದುಕು ಪ್ರಾರಂಭವಾಗಿದ್ದು 8ನೇ ವಯಸ್ಸಿನಲ್ಲಿ. ಲಕ್ಷ್ಮಣರಾವ್ ಇನಾಮದಾರ್ ಅವರ ಮಾರ್ಗದರ್ಶನದಲ್ಲಿ ಮೋದಿ ಆರ್‌ಎಸ್‌ಎಸ್‌ ಜೂನಿಯರ್ ಕೆಡೆಟ್ ಆಗಿದ್ದರು.

ಪ್ರಧಾನಿ ಮೋದಿಗೆ ಸಂತನಾಗಬೇಕೆಂಬ ಆಕಾಂಕ್ಷೆ ಪ್ರಬಲವಾಗಿತ್ತು. ಅವರು ಹಿಮಾಲಯದಲ್ಲಿ ಏಕಾಂತದಲ್ಲಿ ಸುಮಾರು ಎರಡು ವರ್ಷಗಳನ್ನು ಕಳೆದರು. ಅಲ್ಲಿ ಧ್ಯಾನದ ಜೊತೆಗೆ ಹಿಂದೂ ಧರ್ಮದ ತತ್ವಶಾಸ್ತ್ರವನ್ನು ಅಳವಡಿಸಿಕೊಂಡರು.

2001ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ನೇಮಕಗೊಂಡಾಗ ಅವರಿಗೆ ರಾಜ್ಯ ವಿಧಾನಸಭೆಯಲ್ಲಿ ಸ್ಥಾನವಿರಲಿಲ್ಲ.

1947 ರಲ್ಲಿ ದೇಶದ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

ರಾಜಕೀಯವನ್ನು ಹೊರತುಪಡಿಸಿದ್ರೆ ಪ್ರಧಾನಿ ಮೋದಿ ಅತ್ಯುತ್ತಮ ಓದುಗ ಅಷ್ಟೇ ಅಲ್ಲ ಸಾಹಿತಿಯೂ ಹೌದು. ಗುಜರಾತ್‌ನಲ್ಲಿ ಅನೇಕ ಕವಿತೆಗಳನ್ನು ಬರೆದಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಒಂದು ದಿನವೂ ಕರ್ತವ್ಯದಿಂದ ರಜೆ ತೆಗೆದುಕೊಂಡಿಲ್ಲ. ವಿಶೇಷ ಅಂದ್ರೆ ಮೂರಕ್ಕಿಂತ ಹೆಚ್ಚು ವೈಯಕ್ತಿಕ ಸಿಬ್ಬಂದಿಯನ್ನು ಹೊಂದಿರಲಿಲ್ಲ.

ವಿಶಿಷ್ಟ ಜಾಕೆಟ್ ಮತ್ತು ಕುರ್ತಾ ಸೇರಿದಂತೆ ಪ್ರಧಾನಿ ಮೋದಿಯವರ ಅದ್ಭುತ ಫ್ಯಾಶನ್ ಸೆನ್ಸ್ ಅವರನ್ನು ಜಾಗತಿಕ ಫ್ಯಾಷನ್ ಐಕಾನ್ ಎಂದು ಗುರುತಿಸಿದೆ. ಅವರ ನೆಚ್ಚಿನ ಬಟ್ಟೆ ಬ್ರಾಂಡ್ ‘ಜೇಡ್ ಬ್ಲೂ’ ಅಹಮದಾಬಾದ್‌ನದ್ದು.

ಇಂದಿರಾ ಗಾಂಧಿಯವರ ನಂತರ, ಸತತ ಎರಡನೇ ಬಾರಿಗೆ ಸ್ಪಷ್ಟ ಬಹುಮತವನ್ನು ಪಡೆದ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿ.

ಮೋದಿ ಅವರು X (ಟ್ವಿಟರ್) ನಲ್ಲಿ ಸುಮಾರು 92 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅತ್ಯಂತ ಜನಪ್ರಿಯ ವಿಶ್ವ ನಾಯಕರಲ್ಲಿ ಮೋದಿ ಸಹ ಒಬ್ಬರು.

ಪ್ರಧಾನಿ ಮೋದಿ ಅವರಿಗೆ ಶಾಲಾ ದಿನಗಳಲ್ಲಿ ರಂಗಭೂಮಿಯಲ್ಲಿ ಆಸಕ್ತಿಯಿತ್ತು. ಅವರು ನಾಟಕ ನಿರ್ಮಾಣಗಳಲ್ಲೂ ತೊಡಗಿಕೊಳ್ಳುತ್ತಿದ್ದರು. ಇದೇ ಆಸಕ್ತಿ ಅವರನ್ನು ರಾಜಕೀಯದೆಡೆಗೆ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...