alex Certify ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ : ಆಯ್ಕೆಯಾದ ಅಭ್ಯರ್ಥಿಗಳಿಗೆ `ಶಿಕ್ಷಣ ಇಲಾಖೆ’ಯಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ : ಆಯ್ಕೆಯಾದ ಅಭ್ಯರ್ಥಿಗಳಿಗೆ `ಶಿಕ್ಷಣ ಇಲಾಖೆ’ಯಿಂದ ಮಹತ್ವದ ಸೂಚನೆ

ಬೆಂಗಳೂರು  :  2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು ಆಯ್ಕೆಯಾಗಿ ಉಪ ನಿರ್ದೇಶಕರ ಕಛೇರಿಯನ್ನು ಆಯ್ಕೆ ಮಾಡಿಕೊಂಡು ವರದಿ ಮಾಡಿಕೊಂಡಿರುವ ಶಿಕ್ಷಕರುಗಳಿಗೆ ಶಾಲೆಗಳಿಗೆ ನಿಯೋಜಿಸುವ ಕುರಿತಂತೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆಯನ್ನು ನೀಡಿದೆ.

2022-23 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಪ ಪದವೀಧರ ಪ್ರಾಥಮಿಕ ಶಿಕ್ಷಕರು  16 ರಿಂದ 8ನೇ ತರಗತಿ) ಹುದ್ದೆಗೆ ಕೌನ್ಸಿಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಸಂಬಂಧ ಉಲ್ಲೇಖಿತ ಪತ್ರದಲ್ಲಿ ಸೂಚನೆಗಳನ್ನು ನೀಡಲಾಗಿತ್ತು.

ಕೆಲವೊಂದು ಜಿಲ್ಲೆಗಳಲ್ಲಿ ‘4 ವಲಯದಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅಂತಹ ಶಿಕ್ಷಕರುಗಳಿಗೆ ಆಯಾ ವ್ಯಾಪ್ತಿಯ ಉಪನಿರ್ದೇಶಕರ ಕಛೇರಿ (ಆಡಳಿತ)/ಡಯಟ್  ಕಛೇರಿಯನ್ನು ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರುಗಳು ಉಪನಿರ್ದೇಶಕರ ಕಛೇರಿ (ಆಡಳಿತ)ಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಶಿಕ್ಷಕರನ್ನು ತಕ್ಷಣವೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಲಿ ಹುದ್ದೆಗಳಿರುವ ಒಂದು ಪ್ರಾಥಮಿಕ ಶಾಲೆಗಳಿಗೆ ನಿಯೋಜಿಸುವ ಸಂಬಂಧ ಈ ಕೆಳಕಂಡ ಅಂಶಗಳನ್ನು ಪಾಲಿಸಿ ಕ್ರಮವಹಿಸಲು ಸೂಚಿಸಿದೆ.

ಸದರಿ ನಿಯೋಜನೆಯು ತಾತ್ಕಾಲಿಕವಾಗಿದ್ದು ” ವಲಯದಲ್ಲಿ ಖಾಲಿ ಹುದ್ದೆಯನ್ನು ಸ್ಥಳ ನಿಯುಕ್ತಿವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ನಿಯೋಜನೆಗೆ ಶಾಲೆಯನ್ನು ಆಯ್ಕೆ ಮಾಡುವಾಗ ಕಡ್ಡಾಯವಾಗಿ ವ್ಯಾಪ್ತಿಯಲ್ಲಿನ ಆವಿ ಹೆಚ್ಚುಮಕ್ಕಳ ಸಂಖ್ಯೆ ಇರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರಥಮ ಆಧ್ಯತೆಯನ್ನು ನೀಡುವುದು.

ಬಹುಮಾಧ್ಯಮ  ದ್ವಿ-ಭಾಷಾ ಮಾಧ್ಯಮ ಶಾಲೆಗಳು/ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ, ಅಗತ್ಯತೆಗಳನುಸಾರವಾಗಿ ನಿಯೋಟಿಕುದ್ದರು.

ಹೀಗೆ ನಿಯೋಜನೆ ಮಾಡುವಾಗ ಹಾಲಿ ಕರ್ತವ್ಯ ನಿರತ ಶಿಕ್ಷಕರುಗಳು ವಿವಿಧ ಕರಣಗಳಿಂವಾ ದೀರ್ಘಾವಧಿ ರಜೆ ಹಾಗೂ ಇನ್ನಿತರೆ ಕಾರಣಗಳಿಂದ ರಜೆ ಪಡೆದ ಶಾಲೆಗಳಿಗೆ ಶೈಕ್ಷಣಿಕ ಹಿತದೃಷ್ಟಿಯನ್ನು ಗದುನಿಸಿ ನಿಯೋಜಿಸುವುದು.

ಹೊಸದಾಗಿ  ನೇಮಕಗೊಂಡ ಶಿಕ್ಷಕರು ನಿಯೋಜನೆ ಸಂಬಂಧ ಯಾವುದೆ: ಪ್ರಭಾವ (ಶಿಫಾರಸ್ಸು ತಂದಲ್ಲಿ ಕರ್ನಾಟಕ ನಾಗರೀಕ ಸೇವಾ ನಡೆತ ನಿಯಮಗಳು-2021 ರನ್ವಯ ಸೂಕ್ತ ಶಿಸ್ತು ಕ್ರಮ ಜರುಗಿಸುವುದು.

ಹೊಸದಾಗಿ ನೇಮಕವಾದ ಶಿಕ್ಷಕರ ಪಾತಬೋಧನೆಯ ಕಾರ್ಯ ವೈಖರಿಯನ್ನು ವ್ಯಾಪ್ತಿಯು ಕ್ಷೇತ್ರಶಿಕ್ಷಣಾಧಿಕಾರಿಗಳು  ಕಾಲಕಾಲಕ್ಕೆ ನಿಗಾವಹಿಸತಕ್ಕದ್ದು, ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರುಗಳು ಕಡ್ಡಾಯವಾಗಿ ಕಾಲಕಾಲಕ್ಕೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸತಕ್ಕದ್ದು.

ಈ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಹೊಸದಾಗಿ ನೇಮಕವಾದ ಶಿಕ್ಷಕರ ಆದೇಶವನ್ನು ಪರಿಶೀಲಿಸಿಕೊಂಡು ಕರ್ತವ್ಯಕ್ಕೆ ಹಾಜರಾದ ವಿನಾಂಕ ಮತ್ತು ನಿಯೋಜಿಸಿದ ದಿನಾಂಕ ಮತ್ತು ಹಾಜರಾತಿಯನ್ನು ಕಡ್ಡಾಯವಾಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ನಿರ್ವಹಿಸತಕ್ಕದ್ದು, ಈ ಸಂಬಂಧ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ದಾಖಲೆಯನ್ನು ಸಂರಕ್ಷಿಸತಕ್ಕದ್ದು, ಈ  ಕುರಿತಂತೆ ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ) ಇವರಿಗೆ ವರದಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಸಲ್ಲಿಸುವುದು.

ಉಪನಿರ್ದೇಶಕರ ಕಛೇರಿ/ಡಯಟ್ ಕಛೇರಿಗೆ ಸ್ಥಳ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರಿಗೆ ಪ್ರಸ್ತುತ ನಿಯೋಜಿಸುವ ಆದೇಶವು ತಾತ್ಕಾಲಿಕವಾಗಿರುತ್ತದೆ.  ಸದರಿ ನಿಯೋಜಿತ ಶಾಲೆಯನ್ನು ಮೂಲ ಶಾಲೆಯೆಂದು ಭಾವಿಸತಕ್ಕದ್ದಲ್ಲ ಎಂಬುದನ್ನು ಶಿಕ್ಷಕರುಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಸ್ಪಷ್ಟಪಡಿಸತಕ್ಕದ್ದು. ಶಿಕ್ಷಕರ ನಿಯೋಜನೆಸಂಬಂಧ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸತಕ್ಕದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...