alex Certify ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್

ಭಾರೀ ಕಾತರದಿಂದ ಕಾಯುತ್ತಿದ್ದ ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌‌ ಈಗ ಬಿಡುಗಡೆಯಾಗಿದೆ. ಕನ್ನಡ ರೊಮ್ಯಾಂಟಿಕ್ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ರಾಣಾ ಹಾಗೂ ಪಾದಾರ್ಪಣೆ ಮಾಡುತ್ತಿರುವ ನಟಿ ರೇಷ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದ ಟ್ರೇಲರ್‌ ಶೇರ್‌ ಮಾಡಿಕೊಂಡ ಪ್ರೇಮ್, “ಚಿತ್ರದ ಐದು ಹಾಡುಗಳನ್ನು ಬ್ಲಾಕ್‌ಬಸ್ಟರ್‌ ಹಿಟ್ ಮಾಡಿದ್ದಕ್ಕೆ ಧನ್ಯವಾದ. ಮಾತು ಕೊಟ್ಟಂತೆಯೇ, ದಾವಣಗೆರೆಯ ಅಶೋಕಾ ಥಿಯೇಟರ್‌‌ನಲ್ಲಿ ಫೆಬ್ರವರಿ 14ರಂದು ಬಿಡುಗಡೆಯಾಗಲಿರುವ 6ನೇ ಹಾಡಿನ ಟ್ರೇಲರ್‌ ನಿಮಗೆ‌ ಅರ್ಪಿಸುತ್ತಿದ್ದೇವೆ. ಚಿತ್ರ 24ನೇ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ, ನಿಮ್ಮ ಪ್ರೀತಿ ಹೀಗೇ ಇರಲಿ ನಮ್ಮನ್ನು ಬೆಂಬಲಿಸುತ್ತಿರಿ,” ಎಂದಿದ್ದಾರೆ.

ಚಿತ್ರತಂಡವು ಜ಼ೀ ಕನ್ನಡದ ಸಾ ರೆ ಗ ಮಾ ಪ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿತ್ತು. ಈ ವೇಳೆ ಚಿತ್ರದ ಪ್ರಮೋಷನ್‌ ಸಹ ಮಾಡಲಾಗಿದೆ.

ರಕ್ಷಿತಾಸ್ ಫಿಲ್ಮ ಫ್ಯಾಕ್ಟರಿ ನಿರ್ಮಾಣದ ಈ ಚಿತ್ರದಲ್ಲಿ ರಚಿತಾ ರಾಮ್ ಸಹ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಮಹೇನ್ ಸಿಂಹ ಹಾಗೂ ಶ್ರೀನಿವಾಸ ಪಿ ಬಾಬು ಸಿನೆಮಾಟೋಗ್ರಫಿ ಮತ್ತು ಎಡಿಟಿಂಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...