alex Certify ಸತೀಶ್ ಜಾರಕಿಹೊಳಿ 2020 ರಲ್ಲಿ ಖರೀದಿಸಿದ್ದ ಕಾರಿಗೆ ‘2023’ ಸಂಖ್ಯೆ; ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತೀಶ್ ಜಾರಕಿಹೊಳಿ 2020 ರಲ್ಲಿ ಖರೀದಿಸಿದ್ದ ಕಾರಿಗೆ ‘2023’ ಸಂಖ್ಯೆ; ಇದರ ಹಿಂದಿದೆ ಈ ಕಾರಣ

ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮೂಢನಂಬಿಕೆಗಳ ವಿರೋಧಿ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಅವರು, ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿಯವರು 2020ರಲ್ಲಿ ಖರೀದಿಸಿದ್ದ ತಮ್ಮ ಹೊಸ ಫಾರ್ಚುನರ್ ಕಾರಿಗೆ ಕೆಎ 49 ಎನ್ 2023 ನಂಬರ್ ಪಡೆದುಕೊಂಡಿದ್ದು, ಇದರ ಹಿಂದಿನ ಕಾರಣ ಈಗ ಬಹಿರಂಗವಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಖಚಿತ ವಿಶ್ವಾಸದಲ್ಲಿದ್ದ ಅವರು, ಆಗಲೇ ಈ ಸಂಖ್ಯೆ ಪಡೆದುಕೊಂಡಿದ್ದು, ತಮ್ಮ ಹೊಸ ಕಾರನ್ನು ಸ್ಮಶಾನದಿಂದಲೇ ಬಳಸಲು ಆರಂಭಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...